ಬಂಟ್ವಾಳ

ಪೊಳಲಿಯಲ್ಲಿ ವಿಹಿಂಪ, ಬಜರಂಗದಳದಿಂದ ಬೋರ್ಡ್ – ಸಾಂಪ್ರದಾಯಿಕ ವಸ್ತ್ರ ಧರಿಸಲು ವಿನಂತಿ

ಬಂಟ್ವಾಳ: ಹಿಂದು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದೇವಸ್ಥಾನವನ್ನು ಪ್ರವೇಶಿಸಬೇಕಾಗಿ ವಿನಂತಿ.. ಈ ಸಂದೇಶವಿರುವ ಬೋರ್ಡ್ ಅನ್ನು ವಿಶ್ವಹಿಂದು ಪರಿಷತ್ತು, ಬಜರಂಗದಳದ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಅಳವಡಿಸಲಾಗಿದೆ.

ವಿಶ್ವ ಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ 3000 ಜನ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದ್ದರು. ಅದರಂತೆ  ಆದಷ್ಟು ಬೇಗ  ವಸ್ತ್ರಸಂಹಿತೆ ನೀತಿ  ಜಾರಿಯಾಗಬೇಕೆಂದು  ಬಂಟ್ವಾಳ ಪ್ರಖಂಡದ ವತಿಯಿಂದ  ದೇವಾಸ್ಥಾನದಲ್ಲಿ ಶುಕ್ರವಾರ ವಸ್ತ್ರಸಂಹಿತೆ ಬೋರ್ಡ್ ಅಳವಡಿಸಲಾಯಿತು. ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೆಲ್, ಜಿಲ್ಲಾ ಸಹ ಸಂಚಾಲಕ್ ಗುರುರಾಜ್ ಬಂಟ್ವಾಳ್, ವಿ.ಹಿಂ.ಪ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಬಜರಂಗದಳ ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಸಂತೋಷ್ ಕೆ ಸರಪಾಡಿ, ದೀಪಕ್ ಬಂಟ್ವಾಳ್, ಪ್ರಸಾದ್ ಬೆಂಜನಪದವು, ರತೀಶ್ ರಾಮಲ್ ಕಟ್ಟೆ, ಪ್ರವೀಣ್ ಕುಂಟಾಲಪಲ್ಕೆ, ಅಶ್ವತ್ ಪೂಂಜಾಲ್ ಕಟ್ಟೆ, ಪೋಳಲಿ ಖಂಡ ಸಮಿತಿ ಹಾಗೂ ಘಟಕದ ಪ್ರಮುಖರು ಉಪಸ್ಥಿತರಿದ್ದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ