ಬಂಟ್ವಾಳ: ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಬೂತ್ ಅಧ್ಯಕ್ಷರುಗಳ ಮನೆ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪಕ್ಷ ಸಂಘಟನಾತ್ಮಕ ವಾಗಿ ಬೆಳೆಯಲು ಪೂರಕವಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ತೇಜಸ್ ಪೂಜಾರಿ, ನವೀನ್ ಪೂಜಾರಿ, ಉಮೇಶ್ ಗೌಡ, ಶರತ್ ಮೇಲುಗುಡ್ಡೆ, ದಾಮೋದರ ಪೂಜಾರಿ, ವಿನೋದ್ ಅಡಪ ಅವರ ಮನೆಗೆ ತೆರಳಿದ ಶಾಸಕರು ನಾಮಫಲಕ ಅನಾವರಣಗೊಳಿಸಿದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ರಮನಾಥ ರಾಯಿ, ತಾಪಂ ಮಾಜಿ ಸದಸ್ಯಪ್ರಭಾಕರ ಪ್ರಭು, ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ, ಉಪಾಧ್ಯಕ್ಷ ವಿಮಲ ಮೋಹನ್, ಗ್ರಾ.ಪಂ.ಸದಸ್ಯರಾದ ಪ್ರೇಮ ಪೂಜಾರಿ, ಸುನಿಲ್ ಶೆಟ್ಟಿ ಗಾರ್, ಸಂದೇಶ್ ಶೆಟ್ಟಿ, ಶಾಂತ, ಶಕುಂತಲಾ, ಸುರೇಶ್ ಕುಲಾಲ್, ಉದಯ ,ದಾಮೋದರ, ರಾಜೀವಿ, ಹೇಮಲತಾ, ವಿದ್ಯಾಪ್ರಭು, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಪ್ರಮುಖ ರಾದ ರತ್ನಕುಮಾರ್ ಚೌಟ ಜಯರಾಮ ಅಡಪ, ಸಂತೋಷ ಕುಮಾರ್ ರಾಯಿಬೆಟ್ಟು, ದೀಪಕ್ ಶೆಟ್ಟಿ ಗಾರ್ , ಎಸ್.ಪಿ.ಶ್ರೀಧರ್, ಉಮೇಶ್ ಗೌಡ, ಪ್ರಪುಲ್ ರೈ, ದಿನೇಶ್ ಶೆಟ್ಟಿ ದಂಬೆದಾರ್ , ಯೋಗೀಶ್ ಆಚಾರ್ಯ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ವೀರಭದ್ರ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಕರ್ಪೆ, ಗುತ್ತಿಗೆಬಳ್ಳಿ ರಸ್ತೆ ಮೂಲಕ ರಾಯಿ ಸಂಪರ್ಕವನ್ನು ಮಾಡುವ ರಸ್ತೆ ಕಾಂಕ್ರೀಟ್ ಗೆ 6ಕೋಟಿ 80 ಲಕ್ಷ ಅನುದಾನ ಒದಗಿಸಿದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಕರ್ಪೆ ಯಲ್ಲಿ ಅಭಿನಂದಿಸಲಾಯಿತು.