ಬಂಟ್ವಾಳ: ಕುಕ್ಕಿಪಾಡಿ ಗ್ರಾ.ಪ.ವ್ಯಾಪ್ತಿಯ 5 ಬೂತ್ಗಳ ಬಿಜೆಪಿ ಅಧ್ಯಕ್ಷರುಗಳ ಮನೆಗಳಿಗೆ ಭೇಟಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಅಲ್ಲಿ ನಾಮಫಲಕಗಕವನ್ನು ಅನಾವರಣ ಮಾಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲ್ಲಿ ಸುಮಾರು 600. ಕೋಟಿಗೂ ಅಧಿಕ ಪ್ರಮಾಣದ ವಿವಿಧ ಅಭಿವೃದ್ಧಿ ಕಾಮಗಾರಿ ಗಳು ನಡೆದಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿ ಗಳು ನಡೆಯುತ್ತದೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದರು.
ಬೂತ್ ನಂ. 7 ರ ಅಧ್ಯಕ್ಷ ನಿತಿನ್ ಪೂಜಾರಿ, ಬೂತ್ ನಂ.9 ರ ಅಧ್ಯಕ್ಷ ಗಂಗಾಧರ ಗೌಡ ಕುಕ್ಕೇಡಿ, ಬೂತ್ ನಂ.8 ರ ಅಧ್ಯಕ್ಷ ಶಿವಾನಂದ ಪೂಜಾರಿ ಕೆಂತಲೆ , ಎಲಿಯನಡುಗೋಡು ಗ್ರಾಮದ ಬೂತ್ ನಂ.11 ರ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಬೂತ್ ನಂ.10 ರ ಅಧ್ಯಕ್ಷ ಅಮ್ಮು ನಡ್ಯೋಡಿ ಅವರ ಮನೆ ಗೆ ಶಾಸಕರು ಭೇಟಿ ನೀಡಿದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ತಾಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು, ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ ಮಾತನಾಡಿದರು. ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಸುಜಾತ ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯ ರಾದ ಲಿಂಗಪ್ಪ ಪೂಜಾರಿ, ಚಂದ್ರ ಕೋರ್ಯಾರ್ , ಬೇಬಿ ಪೂಜಾರಿ, ಪೂರ್ಣಿಮಾ ಪೂಜಾರಿ, ಶೇಖರ್ ಶೆಟ್ಟಿ ಬದ್ಯಾರ್, ಪ್ರತಿಭಾ ಶೆಟ್ಟಿ, ಗೀತಾಗೋಪಾಲನಾಯ್ಕ್, ಶೋಭಾ,ಪುಷ್ಪಾ, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಕಾರ್ಯದರ್ಶಿ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಕಾವಳಪಡೂರು ಗ್ರಾಮದ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಪ್ರಮುಖರಾದ ಹರೀಶ್ ಪೂಜಾರಿ, ದಿನೇಶ್ ಶೆಟ್ಟಿ ,ಉಮೇಶ್ ಗೌಡ, ಡಾಕಯ್ಯ ಗೌಡ, ನಿತಿನ್ ಕುಲಾಲ್, ಪ್ರಭಾತ್ ನಾಯಕ್, ಮಹಾಬಲ ಶೆಟ್ಟಿ, ರತ್ನಾಕುಮಾರ್ ಚೌಟ, ರಘರಾಮ ಶೆಟ್ಟಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಸೀತಾನಂದ ಶೆಟ್ಟಿ ಅಡಮೊಗರು, ಸದಾನಂದ ಶೆಟ್ಟಿ, ಸುಂದರ ಶೆಟ್ಟಿ ಕರೆಂಕಿಲ, ಸಂಜೀವ ಶೆಟ್ಟಿ, ಪ್ರಶಾಂತ್ ಪೂಜಾರಿ, ಗಣೇಶ್ ರೈ ಮಾಣಿ ಮತ್ತಿತರರು ಉಪಸ್ಥಿತರಿದ್ದರು.