ಬಂಟ್ವಾಳ: ಬ್ರಹ್ಮಕಲಶದಿಂದ ಸಮಾಜದ ನವನಿರ್ಮಾಣವಾಗುವುದು. ಸಾನಿಧ್ಯಾಭಿವೃದ್ಧಿಯಿಂದ ಸಮಾಜಕ್ಕೆ ಕ್ಷೇಮ. ದೇವಸ್ಥಾನ ಇಡೀ ಸಮಾಜಕ್ಕೆ ಸಂಸ್ಕಾರ ಕೊಡುವ ಕೇಂದ್ರ. ಇದರಿಂದ ಯಾವುದೇ ಜಾತಿ ಮತ ಬೇಧವಿಲ್ಲದೆ ಇಡೀ ಸಮಾಜವನ್ನು ಒಗ್ಗೂಡಿಸಲು ಸಾಧ್ಯವಾಗುವುದು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ನುಡಿದರು.ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಳದ ರಾಜಾಂಗಣದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
2022 ಫೆಬ್ರವರಿಯಲ್ಲಿ ದೇವಳಕ್ಕೆ ಬ್ರಹ್ಮಕಲಶೋತ್ಸವ ನಡೆಸುವುದಾಗಿ ನಿರ್ಧರಿಸಿದ್ದು, ಈ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಮುಂಡಾಜೆಗುತ್ತು ನವೀನ್ ಚಂದ್ರ ಶೆಟ್ಟಿ ಗೌರವಾಧ್ಯಕ್ಷರಾಗಿ ಹಾಗೂ ಸದಾನಂದ ಶೆಟ್ಟಿ ರಂಗೋಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಳಿದಂತೆ ಗಣೇಶ್ ಸುವರ್ಣ ತುಂಬೆ ಪ್ರಧಾನ ಕಾರ್ಯದರ್ಶಿ, ತೇವು ತಾರನಾಥ ಕೊಟ್ಟಾರಿ ಸಂಚಾಲಕರಾಗಿ ಹಾಗೂ ಕವಿರಾಜ್ ಚಂದ್ರಿಗೆ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಉಳಿದಂತೆ ಗೌರವಸಲಹೆಗಾರರು, ಉಪಾಧ್ಯಕ್ಷರು, ಕಾರ್ಯದರ್ಶಿಗಳನ್ನು ಮತ್ತು ಉಪಸಮಿತಿಗಳನ್ನು ರಚಿಸಲಾಯಿತು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಅರ್ಚಕರಾದ ರಾಧಾಕೃಷ್ಣ ಕಡಂಬಳಿತ್ತಾಯ, ಶಿವರಾಮ ಶಿಬರಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಊರಹತ್ತು ಸಮಸ್ತರು ಹಾಗೂ ಕಳ್ಳಿಗೆ, ತುಂಬೆ, ಬಿ.ಮೂಡ, ನಡು ಗ್ರಾಮದಿಂದ ಸುಮಾರು 300ಕ್ಕೂ ಅಧಿಕ ಗ್ರಾಮಸ್ಥರು ಉಪಸ್ಥಿತರಿದ್ದರು.