ಬಂಟ್ವಾಳ: ಗರ್ಭಿಣಿಯರು, ತೂಕ ಕಡಿಮೆ ಮಕ್ಕಳ, ಆಯ್ದ ಕಿಶೋರಿಯರ ವಿಶೇಷ ಆರೋಗ್ಯ ತಪಾಸಣೆ ಬಂಟ್ವಾಳ ಲಯನ್ಸ್ ಕ್ಲಬ್ ನಲ್ಲಿ ಮಂಗಳವಾರ ನಡೆಯಿತು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಗರ್ಭಿಣಿಯರು, ಅಪೌಷ್ಟಿಕತೆ ಹಾಗೂ ತೂಕ ಕಡಿಮೆ ಇರುವ ಮಕ್ಕಳು, ಕಿಶೋರಿಯರು ಶಿಬಿರದ ಪ್ರಯೋಜನ ಪಡೆದುಕೊಂಡರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಬಂಟ್ಚಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಂಟ್ವಾಳ, ಲಯನ್ಸ್ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಬಂಟ್ಚಾಳ ಮತ್ತು ಎ.ಜೆ.ಇನ್ಸಿಟ್ಯುಟ್ ಆಫ್ ಮೆಡಿಕಲ್ ಕಾಲೇಜ್ ರಿಸರ್ಚ್ ಸೆಂಟರ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 130 ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡರು. ತಜ್ಞವೈದ್ಯರಿಂದ ತಪಾಸಣೆ, ರೋಟರಿಯಿಂದ ಪೌಷ್ಠಿಕಾಂಶದ ವಿಟಮಿನ್ ಪೌಡರ್ ವಿತರಣೆ ನಡೆಯಿತು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ್ ಚಾಲನೆ ನೀಡಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ವಸಂತ ಬಾಳಿಗಾ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಹಮ್ಮದ್ ವಳವೂರು, ರೋಟರಿ ಕಾರ್ಯದರ್ಶಿ ಧನಂಜಯ ಬಾಳಿಗಾ, ಲಯನ್ಸ್ ವಿಶೆಷ ಚೇತನ ಮಕ್ಕಳ ಪಾಲನಾ ಕೇಂದ್ರದ ಸಂಚಾಲಕ ದಾಮೋದರ ಬಿ.ಎಂ, ತಜ್ಞ ವೈದ್ಯರಾದ ಡಾ.ಜೀವನ್ ಲಸ್ರಾಡೊ, ಡಾ.ಸಂದೀಪ್, ಎ.ಜೆ. ಮೆಡಿಕಲ್ ಆಸ್ಪತ್ರೆಯ ಸೋಶಿಯಲ್ ವರ್ಕರ್ ಪ್ರಜ್ಞಾ, ಡಾ. ಅಕ್ಷತಾ ಶೆಟ್ಟಿ, ಡಾ.ಸಂಜನಾ, ಡಾ.ನೈದಿಲಾ, ಡಾ.ಪ್ರಮದಾ ಉಪಸ್ಥಿತರಿದ್ದರು, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ರವೀಂದ್ರ ಕಂಬಳಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು.