ಪ್ರಧಾನಿ ಜನ್ಮದಿನದ ಅಂಗವಾಗಿ ಸೇವೆ, ಸಮರ್ಪಣೆ ಕಾರ್ಯಕ್ರಮ
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 71 ನೇ ಜನ್ಮ ದಿನದ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಕ್ಷೇತ್ರ ಬಿಜೆಪಿಯ ವತಿಯಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಆರಂಭಗೊಂಡಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಭಜನೆಯ ಸಂಪ್ರದಾಯ ಪ್ರಕಾರ ,ಪೊಳಲಿ ಶ್ರೀ ರಾಜ ರಾಜೇಶ್ವರೀ,ಭಜನಾ ಮಂಡಳಿಯ ವೆಂಕಟೇಶ್ ನಾವಡ ರಿಗೆ ತಾಳವನ್ನು ನೀಡಿದ, ಶಾಸಕ ರಾಜೇಶ್ ನಾಯ್ಕ್,ಉಳಿಪ್ಪಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವತಃ ಪಾಲ್ಗೊಂಡರು.
ಶಾಸಕ ರಾಜೇಶ್ ನಾಯ್ಕ್ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಶ್ರೀ ರಕ್ತೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ಮೋದಿಯವರ ಆರೋಗ್ಯಕ್ಕೆ ರಕ್ಷಣೆ ನೀಡಲಿ, ಅಧಿಕಾರತ್ವ ಇನ್ನಷ್ಟು ಬಲಿಷ್ಟ ವಾಗಲಿ ಎಂದು ದೇವರಿಗೆ ಪೂಜೆ ಸಲ್ಲಿಸಿ ದರು.
ಭಜನಾ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ಗಳಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸೀತಾರಾಮ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಯುಮೋರ್ಚಾ ಅಧ್ಯಕ್ಷ ಪ್ತದೀಪ್ ಅಜ್ಜಿಬೆಟ್ಟು, ಬಂಟ್ವಾಳ ಬಿಜೆಪಿ ಕೋಶಾಧಿಕಾರಿ ಪ್ರಕಾಶ್ ಅಂಚನ್, ಪ್ರಮುಖರದ ಗೋಪಾಲ ಸುವರ್ಣ, ಜನಾರ್ದನ ಬೊಂಡಾಲ, ವೆಂಕಟೇಶ ನಾವುಡ ಪೊಳಲಿ ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಉಮೇಶ ಅರಳ, ಪ್ರಣಾಮ್ ರಾಜ್, ಅಶಿಶ್ ಅಜ್ಜಿಬೆಟ್ಟು, ಜನಾರ್ಧನ ಬೊಂಡಾಲ, ಮನೋಜ್ ಕಳ್ಳಿಗೆ, ದೇವಸ್ಥಾನದ ಶಿವಶಂಕರ್ ಮುಂತಾದವರು ಉಪಸ್ಥಿತರಿದ್ದರು.ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಘಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದ್ದು ಪೊಳಲಿ ಶ್ರೀ ರಾಜ ರಾಜೇಶ್ವರಿ ಭಜನಾ ಮಂಡಳಿಯವರಿಂದ ಭಜನೆ ಆರಂಭಗೊಂಡಿತು..ನಮೋ ಆ್ಯಪ್,. ಅಂಚೆ ಕಾರ್ಡ್ ಅಭಿಯಾನ, ಕರ ಕುಶಲ ವಸ್ತು ಪ್ರದರ್ಶನ.,ನಮೋ ಟೀ ಸ್ಟಾಲ್., ಮನ್ ಕಿ ಬಾತ್ ವೀಕ್ಷಣಾ ಕಾರ್ಯಕ್ರಮ ಈ ಸಂದರ್ಭ ಇರಲಿದೆ.