ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಹಾಗೂ ಇದರ ಉಪಕೇಂದ್ರ ವೀರಕಂಬ ಮತ್ತು ಗ್ರಾಮ ಪಂಚಾಯತ್ ವೀರಕಂಬ ಇದರ ಸಹಯೋಗದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ ಹಾಗೂ ವಿಶ್ವ ಸೊಳ್ಳೆ ದಿನಾಚರಣೆ 2021 ಅಂಗವಾಗಿ ಡೆಂಗ್ಯೂ ಹಾಗೂ ಮಲೇರಿಯಾ ನಿರ್ಮೂಲನ ಮಾಹಿತಿ ಸಭೆ ನಡೆಯಿತು.
ಆರೋಗ್ಯದ ವಿಚಾರವಾಗಿ ಯಾರೂ ಯಾವುದೇ ರೀತಿಯ ಉದಾಸೀನ ಸಲ್ಲದು. ಸರಕಾರದ ವ್ಯವಸ್ಥೆ ಯು ಪ್ರತಿ ಎಂದು ವಿಟ್ಲ ಸಮುದಾಯ ಕೇಂದ್ರದ ಹಿರಿಯ ಆರೋಗ್ಯ ಸುರಕ್ಷ ಅಧಿಕಾರಿ ಇಂದಿರಾ ನಾಯ್ಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸದಸ್ಯರಾದ ಜಯಪ್ರಸಾದ್, ಸಂದೀಪ್, ಮೀನಾಕ್ಷಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಜ್ಯೋತಿ ಕೆ. ಎನ್, ಮತ್ತು ಜ್ಯೋತಿ ಪಿ ,ಆಶಾ ಕಾರ್ಯಕರ್ತರಾದ ಲೀಲಾವತಿ, ಕೋಮಲಾಕ್ಷಿ, ಮಜಿ ಅಂಗನವಾಡಿ ಶಿಕ್ಷಕಿ ಸುಮತಿ ಮೊದಲಾದವರು ಉಪಸ್ಥಿತರಿದ್ದರು