ಬಂಟ್ವಾಳ: ಕೊಡಂಗೆ ಎಂಬಲ್ಲಿ ನಿಲ್ಲಿಸಿದ್ದ ಲಾರಿಯೊಂದು ಅಕಸ್ಮಾತ್ ಚಲಿಸಿ ಅದರ ಚಾಲಕನೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೊಡಂಗೆ ಎಂಬಲ್ಲಿ ಜಲ್ಲಿ ಕಲ್ಲುಗಳನ್ನು ಲೋಡ್ ಮಾಡಲು ಲಾರಿ ನಿಲ್ಲಿಸಿದ್ದ ವೇಳೆ ಚಲಿಸಿ, ಚಾಲಕ ಬಾಗಲಕೋಟೆ ಜಿಲ್ಲೆಯ ನಿವಾಸಿ ಬಾಲಪ್ಪ ಮೃತಪಟ್ಟರು. ಲಾರಿ ನಿಲ್ಲಿಸಿ ಪಕ್ಕದಲ್ಲಿದ್ದ ವೇಳೆ ಲಾರಿ ನಿಧಾನವಾಗಿ ಮುಂದೆ ಚಲಿಸುತ್ತಿರುವ ವಿಚಾರದ ಕುರಿತು ಜೆಸಿಬಿ ಚಾಲಕ ಗಮನ ಸೆಳೆದ ಸಂದರ್ಭ ಲಾರಿ ತಡೆಯಲು ಚಕ್ರದಡಿ ಕಲ್ಲು ಇಡುವ ಪ್ರಯತ್ನಕ್ಕೆ ಬಾಲಪ್ಪ ಮುಂದಾದರು. ಈ ಸಂದರ್ಭ ದುರ್ಘಟನೆ ಸಂಭವಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…