ಬಂಟ್ವಾಳ: ಪಣೋಲಿಬೈಲು ದೈವಸ್ಥಾನದ ಬಳಿ ಇರುವ ಹೂವಿನಂಗಡಿಯ ನಾಮಫಲಕವನ್ನು ತುಳುವಿನಲ್ಲಿ ಹಾಕುವ ಮೂಲಕ ಇಲ್ಲಿನ ಅಂಗಡಿ ಮಾಲೀಕರು ತುಳು ಭಾಷಾ ಪ್ರೇಮವನ್ನು ಮೆರೆದಿದ್ದಾರೆ.
ತುಲುನಾಡ ಯುವಸೇನೆ ಬಂಟ್ವಾಳ ಇವರ ಮನವಿ ಮೇರೆಗೆ ಅಂಗಡಿ ಮಾಲೀಕರಾದ ರವೀಂದ್ರ ಕುಲಾಲ್ ಹಾಗೂ ಯೋಗಿನಿ ರವೀಂದ್ರ ಕುಲಾಲ್ ತಮ್ಮ ಹೂವಿನ ಅಂಗಡಿಗೆ ತುಲು ಲಿಪಿಯ ನಾಮ ಫಲಕವನ್ನು ಹಾಕಿಸಿದ್ದಾರೆ. ಸಜಿಪ ಗ್ರಾಮ ಪಂಚಾಯಿತಿ ಸದಸ್ಯರಾದ ಸೀತಾರಾಮ ಸಜಿಪ ಹಾಗೂ ರಮೇಶ್ ಕುಲಾಲ್ ಪಣೋಲಿಬೈಲು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತುಲುನಾಡ ಯುವಸೇನೆ ಯ ಉಪಾಧ್ಯಕ್ಷರಾದ ಪ್ರತೀಕ್ ತುಲುವೆ, ಖಜಾಂಚಿಯಾದ ಧೀರಜ್ ಕೋಟ್ಯಾನ್, ಸಹ ಕಾರ್ಯದರ್ಶಿಯಾದ ಲಿಖಿತ್ ರಾಜ್ ಸೆರ್ಕಳ ಹಾಗೂ ಸಂಘದ ಸದಸ್ಯರಾದ ರಿತೇಶ್ ಕುಲಾಲ್, ಶರಣ್ ಪಚ್ಚಿನಡ್ಕ ,ಅರುಣ್ ಕುಮಾರ್ ಹಾಗೂ ಸ್ಥಳೀಯರಾದ ನಾರಾಯಣ ಕುಲಾಲ್ ಪಣೋಲಿಬೈಲು,ಯೋಗಿಶ್ ಪೂಜಾರಿ ಪಣೋಲಿಬೈಲು, ಸುರೇಶ್ ಕುಲಾಲ್ ಪಣೋಲಿಬೈಲು, ಸತೀಶ್ ಕುಲಾಲ್ ಪಣೋಲಿಬೈಲು, ಪದ್ಮನಾಭ ಪೂಜಾರಿ ಪಣೋಲಿಬೈಲು ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಲಿಖಿತ್ ರಾಜ್ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.