ಫರಂಗಿಪೇಟೆ: ಕಾರಿನಲ್ಲಿ ಬಂದು ತ್ಯಾಜ್ಯ ಎಸೆಯುವ ವ್ಯಕ್ತಿಯೊಬ್ಬರಿಗೆ 3 ಸಾವಿರ ರೂ ದಂಡ ವಿಧಿಸಿದ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯಿತಿ ಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಮಾರುತಿ ಕಾರಿನಲ್ಲಿ ತ್ಯಾಜ್ಯ ತಂದು ಪುದು ಗ್ರಾಮದ ಹತ್ತನೇ ಮೈಲುಕಲ್ಲು ಎಂಬಲ್ಲಿ ತ್ಯಾಜ್ಯ ಎಸೆಯುವುದನ್ನು ಗಮನಿಸಿದ ಸ್ಥಳೀಯರು ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿದ್ದರು. ಇದರನ್ವಯ ವ್ಯಕ್ತಿಯನ್ನು ಪತ್ತೆ ಹಚ್ಚಿ, ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದದ್ದಕ್ಕಾಗಿ ದಂಡ ವಿಧಿಸಿದೆ. ಬಂಟ್ವಾಳದಿಂದ ಮಂಗಳೂರಿಗೆ ತೆರಳುವ ವೇಳೆ ಈ ವ್ಯಕ್ತಿ ತ್ಯಾಜ್ಯ ಎಸೆದಿದ್ದು, ಗ್ರಾಮದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರಿಗೆ 3ರಿಂದ 5 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲು ಪಂಚಾಯತ್ ನಿರ್ಣಯ ಮಾಡಿದೆ ಎಂದು ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ.