ಬಂಟ್ವಾಳ: ದೇವಸ್ಥಾನಗಳನ್ನು ತೆರವುಗೊಳಿಸಿದ ಮೈಸೂರಿನ ಜಿಲ್ಲಾಡಳಿತ ದ ಕ್ರಮ ವಿರುದ್ಧ ಬಂಟ್ವಾಳ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ಗುರುವಾರ ನಡೆಯಿತು. ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಮಾತನಾಡಿ, ದೇವಸ್ಥಾನಗಳ ವಿರುದ್ದವಾಗಿ ಕಾರ್ಯಚರಣೆ ನಡೆಸಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಈ ಸಂದರ್ಭ ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಪ್ರಮುಖರಾದ ಪದ್ಮನಾಭ ಕಟ್ಟೆ, ಸುರೇಶ್ ಬೆಂಜನಪದವು, ಲೋಹಿತ್ ಪಣೋಲಿಬೈಲು, ಮಿಥುನ್ ಕಲ್ಲಡ್ಕ, ಶಿವಪ್ರಸಾದ್ ತುಂಬೆ, ಅಮಿತ್ ಕಲ್ಲಡ್ಕ, ಸಂತೋಷ್ ಸರಪಾಡಿ, ಪ್ರಸಾದ್ ಬೆಂಜನಪದವು, ವಿನಿತ್ ತುಂಬೆ, ಪ್ರವೀಣ್ ಕುಂಟಾಲಪಲ್ಕೆ, ದೀಪಕ್ ಅಜೆಕಲ, ಅಶ್ವಥ್ ಪುಂಜಾಲಕಟ್ಟೆ ಸಂದೀಪ್ ಬಂಟ್ವಾಳ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…