ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಅಷ್ಟಮಂಗಲ ಪ್ರಶ್ನಾಚಿಂತನೆ ಆರಂಭಗೊಂಡಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನಿರ್ದೇಶನದಂತೆ ಜ್ಯೋತಿರ್ವಿದ್ವಾನ್ ಗಣೇಶ ಕೇಕಣಾಜೆ ಅವರಿಂದ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯುತ್ತಿದೆ. ಸಜೀಪ ಮಾಗಣೆಯ ತಂತ್ರಿಗಳು, ಗುತ್ತು, ಮನೆತನದವರು.ಗುರಿಕಾರರು ಹಾಗೂ ಸಮಸ್ತ ಭಕ್ತ ವೃಂದದ ಸಮಕ್ಷಮ ಪ್ರಶ್ನಾ ಚಿಂತನೆಗೆ ಧಾರ್ಮಿಕ ಮುಂದಾಳುಗಳಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ರಾಜ್ಯ ಧಾರ್ಮಿಕ ಪರಿಷದ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಭಾಗವಹಿಸಿದ್ದರು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ. ಸಜಿಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಭಟ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ. ಸದಸ್ಯರಾದ ಅರುಣ್ ಕುಮಾರ್. ಯಶವಂತ ದೇರಾಜೆ.,ಕವಿತಾ ಗಣೇಶ್ ನಾಯಕ್, ಜಯಶ್ರೀ, ಮೋಹನದಾಸ್ ಹೆಗ್ಡೆ, ದೇವಪ್ಪ ನಾಯಕ್, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಮುಗುಳಿಯ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿ ತಾಯ, ಸಜಿಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟೇಶ್ವರ ಭಟ್ ಮುಳ್ಳುಂಜ, ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ಕೆ ರಾಧಾಕೃಷ್ಣ ಆಳ್ವ, ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಪ್ರಮುಖರಾದ ಪದ್ಮನಾಭ ಮಯ್ಯ, ಶಶಿರಾಜ್ ರಾವ್. ಸುರೇಂದ್ರ ಮಯ್ಯ. ಸುರೇಶ್ ಗಟ್ಟಿ. ಬಿ ಮಹಾಬಲರೈ, ಚಂದ್ರಶೇಖರ ನಾಯಕ್, ಯಶೋಧರ ರೈ. ಶಿವರಾಮ ಭಂಡಾರಿ, ಜೀವನ ಆಳ್ವ. ದೇವರಾವ್. ಮೊದಲಾದವರು ಉಪಸ್ಥಿತರಿದ್ದರು