ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಜ್ಜೆಯಿಟ್ಟ ಪುತ್ತೂರಿನ ವಿಭಾ ಟೆಕ್ನಾಲಜೀಸ್‌

ಕ್ರಿಪ್ಟೋ ಮಾರುಕಟ್ಟೆಯ ಅವಕಾಶಗಳನ್ನು ಅರಿತು, ಪುಟ್ಟ ಪಟ್ಟಣ ಪುತ್ತೂರಿನಲ್ಲಿ ವಿಭಾ ಟೆಕ್ನಾಲಜೀಸ್‌ ಇದೀಗ ಹೊಸ ಹೆಜ್ಜೆಯನ್ನಿಟ್ಟಿದೆ. ಬಿಟ್‌ಕಾಯಿನ್‌ಝಡ್‌ (BitcoinZ) ಕ್ರಿಪ್ಟೋಕರೆನ್ಸಿಯನ್ನು ತನ್ನ ಅಧಿಕೃತ ಪಾವತಿ ಸ್ವೀಕರಿಸುವ ವಿಧಾನಗಳಲ್ಲಿ ಒಂದಾಗಿ ಅಳವಡಿಸಿಕೊಂಡಿದೆ. ಕಳೆದ ಏಳು ವರ್ಷದಿಂದ ವೆಬ್‌ ಡಿಸೈನಿಂಗ್‌, ಅಪ್ಲಿಕೇಶನ್‌ ಡೆವೆಲಪ್‌ಮೆಂಟ್‌, ಎಸ್‌ಎಂಸ್‌ ಸೊಲ್ಯುಷನ್ಸ್‌ ಇತ್ಯಾದಿ ಸೇವಾ ವಿಭಾಗದಲ್ಲಿ ಹೆಸರುಗಳಿಸಿದ್ದ ವಿಭಾ ಟೆಕ್ನಾಲಜೀಸ್‌, ಇದೀಗ ಕ್ರಿಪ್ಟೋಕರೆನ್ಸಿ – ಬಿಟ್‌ಕಾಯಿನ್‌ಝಡ್‌ (BitcoinZ) ನ್ನು ತನ್ನ ಪೇಮೆಂಟ್‌ ವಿಧಾನವನ್ನಾಗಿ ಬಳಸಿಕೊಳ್ಳಲು ಆರಂಭಿಸಿದೆ.

ಏನಿದು BitcoinZ

ಜಾಹೀರಾತು

ಇದು ಉತ್ಕೃಷ್ಟ ತಂತ್ರಜ್ಞಾನವುಳ್ಳ ಕ್ರಿಪ್ಟೋಕರೆನ್ಸಿ. ಬಿಟ್‌ಕಾಯಿನ್‌ ಮಾದರಿಯಲ್ಲೇ ಕ್ರಿಪ್ಟೋ ಮಾರುಕಟ್ಟೆಗೆ ಪ್ರವೇಶಿಸಿರುವ ಬಿಟಿಸಿಝಡ್‌ ಒಟ್ಟಾರೆ 21 ಬಿಲಿಯನ್‌ ಕಾಯಿನ್‌ಗಳನ್ನು ಮಾರುಕಟ್ಟೆಗೆ ಬಿಡಲಿದೆ. ಪ್ರಸ್ತುತ ಶೇ.50 ರಷ್ಟು ಕಾಯಿನ್‌ಗಳು ಕ್ರಿಪ್ಟೋ ಮಾರುಕಟ್ಟೆಯಲ್ಲಿ ವಿಶ್ವದಾದ್ಯಂತ ಚಲಾವಣಯಲ್ಲಿದೆ. ಅಷ್ಟೇ ಅಲ್ಲದೆ ತಂತ್ರಾಕಿವಾಗಿಯೂ ತನ್ನದೇ ಆದ ವಿಶೇಷತೆಗಳನ್ನೂ ಈ ಕ್ರಿಪ್ಟೋ ನಾಣ್ಯ ಒಳಗೊಂಡಿದೆ.

ಹಣ ಪಾವತಿಗೆ ಹೊಸ ವಿಧಾನ!

ಪ್ರಸ್ತುತ ವಿಭಾ ಟೆಕ್ನಾಲಜೀಸ್‌ ಸಂಸ್ಥೆಗೆ ಕ್ರಿಪ್ಟೋಕರೆನ್ಸಿಯಲ್ಲೂ ಪಾವತಿ ಮಾಡಬಹುದು. BitcoinZ ಕ್ರಿಪ್ಟೋಕಾಯಿನ್‌ನ್ನು ತನ್ನ ಅಧಿಕೃತ ಪಾವತಿ ಸ್ವೀಕರಿಸುವ ವಿಧಾನವನ್ನಾಗಿ ಸಂಸ್ಥೆ ಅಳವಡಿಸಿಕೊಂಡಿದೆ. BitcoinZ ಮಾರುಕಟ್ಟೆ ಪ್ರವೇಶಿಸಿ ನಾಲ್ಕು ವರ್ಷಗಳಾದ ಹಿನ್ನೆಲೆಯಲ್ಲಿ, ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾವತಿ ವಿಧಾನವನ್ನು ಅಧಿಕೃತಗೊಳಿಸಲಾಗಿದೆ.ಹೊಸ ಪದ್ದತಿಯನ್ನು ಆರಂಭಿಸಿದ ವಿಭಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ BitcoinZ ಕಮ್ಯುನಿಟಿಯು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಗುರುತಿಸಿದೆ.

ಈ ಕುರಿತು ವಿಭಾ ಟೆಕ್ನಾಲಜೀಸ್‌ನ ಮಾರ್ಗದರ್ಶಕ ಹಾಗೂ ಐಟಿ ವಿಭಾಗದ ಮುಖ್ಯಸ್ಥ, ಕೇಶವ ಮೂರ್ತಿ ಚಂದ್ರಶೇಖರ್‌, ವಿಶ್ವದಾದ್ಯಂತ ಇಂದು ಕ್ರಿಪ್ಟೋ ತನ್ನದೇ ಆದ ಮಾರುಕಟ್ಟೆ ಹಾಗೂ ಕಮ್ಯುನಿಟಿಯನ್ನು ಸ್ಥಾಪಿಸುತ್ತಿದೆ. ಈಗಾಗಲೇ ಕೆಲ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿ ವಿಧಾನವನ್ನು ತಮ್ಮ ಅಧಿಕೃತ ಹಣಕಾಸು ಚಲಾವಣಾ ನಾಣ್ಯವಾಗಿ ಪರಿಗಣಿಸುವತ್ತ ಹೆಜ್ಜೆ ಇಡುತ್ತಿದೆ. ಅಂತೆಯೇ ಭಾರತದಲ್ಲೂ ಅನೇಕ ಖಾಸಗಿ ಸಂಸ್ಥೆಗಳು ವಿವಿಧ ಬಗೆಯ ಕ್ರಿಪ್ಟೋ ನಾಣ್ಯವನ್ನು ಪೇಮೆಂಟ್‌ ವಿಧಾನವಾಗಿ ಅಳವಡಿಸಿಕೊಳ್ಳುತ್ತಿವೆ. ಇನ್ನು ಮುಂದೆ ವಿಭಾ ಟೆಕ್ನಾಲಜೀಸ್‌ ಸಹ BitcoinZ ತನ್ನ ಪೇಮೆಂಟ್‌ ವಿಧಾನವನ್ನಾಗಿ ಅಳವಡಿಸಿಕೊಳ್ಳಲಿದೆ. ಅಲ್ಲದೆ ಕ್ರಿಪ್ಟೋಕರೆನ್ಸಿ ಹೂಡಿಕೆ ಸಂಬಂಧ ಸಲಹೆಯನ್ನೂ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಮುಂದಿನ ದಿನದಲ್ಲಿ ವಿಭಾ ಸಂಸ್ಥೆಯು, ಕ್ರಿಪ್ಟೋಕರೆನ್ಸಿ ಬಗ್ಗೆ ತಾಂತ್ರಿಕ ಕಾರ್ಯಾಗಾರ, ಶೇರು ಮಾರುಕಟ್ಟೆಯಲ್ಲಿ ತಾಂತ್ರಿಕ ಚಾರ್ಟ್ ವಿಶ್ಲೇಷಿಸಿ ಟ್ರೇಡಿಂಗ್ ಮಾಡುವ ವಿಧಾನ, ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಐಒಟಿ, ಬಿಗ್ ಡೇಟಾ ಇತ್ಯಾದಿ ತಂತ್ರಜ್ಞಾನ ಆಧಾರಿತ ಸರ್ಟಿಫಿಕೇಟ್ ಕೋರ್ಸ್ಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಿದೆ ಎಂದು ತಿಳಿಸಿದರು.

ಪ್ರಮೇಯ ಜ್ಞಾನ ಪ್ರಸರಣ ಕಾರ್ಯಕ್ರಮ!

ಕ್ರಿಪ್ಟೋ ಬಗೆಗೆ ಮಾರುಕಟ್ಟೆಯಲ್ಲಿನ ಅನೇಕ ಮಿಥ್ಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಸಂಸ್ಥೆಯ ಯುವಕರ ತಂಡ, ಇದೀಗ ಪ್ರಮೇಯ ಜ್ಞಾನ ಪ್ರಸರಣ ಕಾರ್ಯಕ್ರಮ (ಪ್ರಮೇಯ ನಾಲೆಡ್ಜ್‌ ಶೇರಿಂಗ್‌ ಇನಿಷಿಯೇಟಿವ್‌) ಆರಂಭಿಸಿದೆ. ಸಂಸ್ಥೆ ಸಂಸ್ಥಾಪಕ ಆದರ್ಶ ನಾರಾಯಣ್‌, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಹೊಸ ಬಗೆಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ಹೆಮ್ಮೆಯ ವಿಷಯ. ಈ ತಂತ್ರಜ್ಞಾನವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಗುರಿ ಸಂಸ್ಥೆಗಿದೆ. ಮುಂದಿನ ದಿನದಲ್ಲಿ ಸಂಸ್ಥೆಯಿಂದ ತಂತ್ರಜ್ಞಾನ ಆಧಾರಿತ ಸರ್ಟಿಫಿಕೇಟ್ ಕೋರ್ಸ್‌ಗಳಲ್ಲಿಯೂ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.