ಸರಪಾಡಿ ನಿವಾಸಿ, ಗಣೇಶ್ ಬೀಡಿ ಗುತ್ತಿಗೆದಾರ ಜನಾರ್ದನ ಭಂಡಾರಿ (60) ಅವರು ಅಸೌಖ್ಯದಿಂದ ಸೆ.12ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ , ಉದಯವಾಣಿ ವರದಿಗಾರ ಕಿರಣ್ ಸರಪಾಡಿ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ. ನಾಟಕ ರಚನೆಗಾರರಾಗಿದ್ದ ಅವರು ಹವ್ಯಾಸಿ ಕಲಾವಿದರಾಗಿದ್ದರು. ಉತ್ತಮ ವಾಲಿಬಾಲ್ ಆಟಗಾರರಾಗಿದ್ದರು. ದೈವಸ್ಥಳ ಯುವಕ ಮಂಡಲ, ಮುಲ್ಕಾಜೆಮಾಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸರಪಾಡಿ ಘಟಕದ ಸಕ್ರಿಯ ಸದಸ್ಯರಾಗಿದ್ದರು.