ಬಂಟ್ವಾಳ: ಉಳಿ ಗ್ರಾ.ಪಂ.ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಳಿ ಆಶ್ರಯದಲ್ಲಿ ಉಳಿ ಗ್ರಾ.ಪಂ.ಸಭಾಭವನದಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆ ಆರಂಭಗೊಂಡಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಪ್ರತಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗಿದೆ, ಆರೋಗ್ಯ ರಕ್ಷಣೆಯ ಜವಾಬ್ದಾರಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯೇ ಪ್ರಥಮವಾಗಿ ಬಂಟ್ವಾಳ ದಲ್ಲಿ ಐಸಿಯು ಬಸ್ ಕಾರ್ಯನಿರ್ವಹಿಸುತ್ತಿದ್ದು, ಜನರ ಬಳಿಗೆ ವೈದ್ಯರು ಹೋಗಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಪ್ರಾರಂಭವಾಗಿದೆ.ಇದರ ಪ್ರಯೋಜನ ಪಡೆಯಲು ಅವರು ತಿಳಿಸಿದರು. ಹಿರಿಯ ವೈದ್ಯ ಡಾ. ಕೆ.ಜಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಉಳಿ ಗ್ರಾಮದಲ್ಲಿ ಸರಕಾರಿ ಆಸ್ಪತ್ರೆಯ ಬೇಡಿಕೆಯನ್ನು ಶಾಸಕರಿಗೆ ನೀಡಿದ್ದು, ಶಾಸಕರು ಸಕಾರಾತ್ಮಕ ಭರವಸೆ ನೀಡಿದರು. ಬೂಡ ಆದ್ಯಕ್ಷ ದೇವದಾಸ್ ಶೆಟ್ಟಿ,ಗ್ರಾ.ಪಂ ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯೆ, ಗ್ರಾ.ಪಂ.ಸದಸ್ಯರಾದ ವಸಂತ ಸಾಲಿಯಾನ್, ಚೇತನ್ ಪೂಜಾರಿ, ಸಂಜೀವ ಗೌಡ, ರೇವತಿ, ಗುಲಾಬಿ, ಶಾಂತ, ವಿಶಾಲಾಕ್ಷಿ, ರಕ್ಷಿತಾ, ಶಾರದ, ಕಕ್ಯೆಬೀಡು ಶ್ರೀ ಪಂಚ ದುರ್ಗಾ ದೇವಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ! ಸತ್ಯಶಂಕರ್ ಶೆಟ್ಟಿ, ಗೋಪಾಲಕೃಷ್ಣ ದೇವಸ್ಥಾನ ದ ಅಧ್ಯಕ್ಷ ವಿಠಲರಾಜ್ , ಉಳಿ ಸಹಕಾರಿ ಬ್ಯಾಂಕ್ ನಿರ್ದೇಶಕ ರಂಜಿತ್ ಮೈರ, ಪ್ರಮುಖರಾದ ಗಣೇಶ್ ಕೋಗುಜೆ, ಡೀಕಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಪದೋನ್ನತಿ ಹೊಂದಿದ ನವೀನ್ ಬೆಂಜನಪದವು ಅವರನ್ನು ಕಾರ್ಯಕ್ರಮ ದಲ್ಲಿ ಅಭಿನಂದಿಸಲಾಯಿತು. ಉಳಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಮೈರ, ಸ್ವಾಗತಿಸಿ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ವಂದಿಸಿದರು.ಗ್ರಾ.ಪಂ.ಸದಸ್ಯ ವಸಂತ ಕಾರ್ಯಕ್ರಮ ನಿರೂಪಿಸಿದರು.