ಶಾಸಕ ರಾಜೇಶ್ ನಾಯ್ಕ್ ಸಹಿತ ಗಣ್ಯರ ಭೇಟಿ
ಬಂಟ್ವಾಳ: ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ 42ನೇ ವರ್ಷದ ಗಣೇಶೋತ್ಸವವನ್ನು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಬೆಳಗ್ಗೆ ಬಂಟ್ವಾಳದಿಂದ ಗಣಪತಿಯನ್ನು ವಾಹನದಲ್ಲಿ ತರಲಾಯಿತು. ಈ ಸಂದರ್ಭ ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಾಜೇಶ್ ಎಲ್. ನಾಯಕ್,, ಪ್ರಮುಖರಾದ ಸತೀಶ್ ಭಂಡಾರಿ, ಬಿ.ಮೋಹನ್, ಲೋಕನಾಥ ಶೆಟ್ಟಿ, ಭಾಸ್ಕರ ಟೈಲರ್ ಮೊದಲಾದವರು ಉಪಸ್ಥಿತರಿದ್ದರು. ಕೊರೊನಾ ನಿಯಮಗಳಿಗೆ ಅನುಸಾರವಾಗಿ ದೇವರ ದರ್ಶನವನ್ನು ಮಾಡಲಾಯಿತು. ಗಣೇಶೋತ್ಸವಕ್ಕೆ ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸಹಿತ ಪ್ರಮುಖರು, ಗಣ್ಯರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…