ಬಂಟ್ವಾಳ

ಬಂಟ್ವಾಳ ತಾಲೂಕಿನಾದ್ಯಂತ ತೆನೆಹಬ್ಬ ಸರಳ ಆಚರಣೆ

ಬಂಟ್ವಾಳ ತಾಲೂಕಿನಾದ್ಯಂತ ತೆನೆಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ವಿವರಗಳು ಇಲ್ಲಿವೆ.

ಮೊಡಂಕಾಪು ಚರ್ಚ್
ದೇವಮಾತಾ ದೇವಾಲಯ ಮೊಗರ್ನಾಡ್
ಲೊರೆಟ್ಟೊ ಮಾತಾ ಚರ್ಚಿನಲ್ಲಿ ಧರ್ಮಗುರುಗಳಾದ ವ. ಫ್ರಾನ್ಸಿಸ್ ಕ್ರಾಸ್ತ, ಲೋರೆಟ್ಟೋ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂ. ಜೇಸನ್ ಮೋನಿಸ್ ಭಕ್ತಾದಿಗಳೊಂದಿಗೆ ಬಲಿ ಪೂಜೆಯನ್ನು ಅರ್ಪಿಸಿದರು
ಸಾಮಾಜಿಕ ಅಂತರದೊಂದಿಗೆ ನಡೆದ ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡರು. ಕೋವಿಡ್ ೧೯ ಸೋಂಕಿನ  ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪರ ಆದೇಶದಂತೆ ಕನ್ಯಾಮಾತೆಯ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದನ್ನು ರದ್ದು ಪಡಿಸಲಾಗಿತ್ತು. ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಕ್ತಿಯಿಂದ , ಸಾಮಾಜಿಕ ಅಂತರದಿಂದ ಪಾಲ್ಗೊಳ್ಳಲು ಬೇಕಾದ ಆಸನದ ವ್ಯವಸ್ಥೆಯನ್ನು  ಮಾಡಲಾಗಿತ್ತು.ಚರ್ಚ್ ವಠಾರದಲ್ಲಿ ಎಲ್ ಇ ಡಿ ಪರದೆಯನ್ನು ಅಳವಡಿಸಲಾಗಿತ್ತು ಕಳೆದ ೯ ದಿನಗಳಿಂದ ನಡೆದ ಮಾತೆ ಮರಿಯಮ್ಮನವರ ನೋವೆನಾ ಪ್ರಾರ್ಥನೆಗೆ ಮಕ್ಕಳು ಹೂಗಳನ್ನು ಅರ್ಪಿಸಿದರು ಚರ್ಚ್ ವ್ಯಾಪ್ತಿಗೆ ಬರುವ ಎಲ್ಲಾ ವಾಹನಗಳನ್ನು  ಆಶೀರ್ವದಿಸಲಾ ಲಾಯಿತು.ಹಾಗೂ  ಸಂಭ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತೆನೆಯನ್ನು ನೀಡಿ ಗೌರವಿಸಲಾಯಿತು. ಮಾತೆ ಮರಿಯಮ್ಮನವರ ಪಲ್ಲಕ್ಕಿಯನ್ನು ಹೂಗಳಿಂದ ಶೃಂಗರಿಸಲಾಗಿತ್ತು.  ಚರ್ಚ್ ಪಾಲನಾ ಮಂಡಳಿ ಸಂಭ್ರಮದ ನೇತೃತ್ವ ವಹಿಸಿದ್ದರು.
ಅಲ್ಲಿಪಾದೆ ಚರ್ಚ್ ಧರ್ಮಗುರು ವಂ| ಫಾ| ಫ್ರೆಡ್ರಿಕ್ ಮೊಂತೆರೋ ಅವರ ನೇತೃತ್ವದಲ್ಲಿ  ಭಕ್ತರು ಬಲಿ ಪೂಜೆ ಅರ್ಪಿಸಿದರು.  ಈ ಸಂದರ್ಭದಲ್ಲಿ ಮಾತೆ ಮರಿಯಮ್ಮ ಅವರ ಮೂರ್ತಿಗೆ ಪುಷ್ಪಾರ್ಚನೆ ನಡೆಸಲಾಯಿತು.ಬಲಿಪೂಜೆಯ ಬಳಿಕ ಪರಿಸರದ ಸಾರ್ವಜನಿಕರ ಸಹಿತ ಕ್ರೈಸ್ತ ಬಾಂಧವರಿಗೆ ಕಬ್ಬು ಮತ್ತು ತೆನೆಯನ್ನು ವಿತರಿಸಲಾಯಿತು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ನವೀನ್ ಜಾನ್ಸನ್‌ಮೊರಾಸ್, ಕಾರ್ಯದರ್ಶಿ ಕಿರಣ್ ನೊರೊನ್ಹಾ, ಕ್ಲೂನಿ ಕಾನ್ವೆಂಟ್‌ನ ಧರ್ಮಭಗಿನಿ ಅರ್ಚನಾ, ವೈ.ಸಿ.ಎಸ್. ಮತ್ತು ಐ.ಸಿ.ವೈ.ಯಂ., ಚರ್ಚ್ ಪಾಲನ ಮಂಡಳಿ ಸಮಿತಿ  ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.