ಬಂಟ್ವಾಳ: ಸಂಘಟನಾತ್ಮಕವಾಗಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಬೂತ್ ಗಳ ಬಿಜೆಪಿ ಅಧ್ಯಕ್ಷರುಗಳ ಮನೆಗೆ ಬೇಟಿ ನೀಡಿ ಅಧ್ಯಕ್ಷರಿಗೆ ಗೌರವ ಸಲ್ಲಿಸಿ ಮನೆಗೆ ನಾಮಫಲಕ ಅನಾವರಣ ಮಾಡಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬೂತ್ ಸಂಖ್ಯೆ 155 ಅಧ್ಯಕ್ಷ ಹಿರಣ್ಮಯಿ, ಬೂತ್ ಸಂಖ್ಯೆ 156 ರ ಅಧ್ಯಕ್ಷ ಶಿವರಾಜ್ ಶೆಟ್ಟಿ, ಬೂತ್ ಸಂಖ್ಯೆ 157ರ ಅಧ್ಯಕ್ಷ ದೀಪಕ್ ಶೆಟ್ಟಿ, ಬೂತ್ ಸಂಖ್ಯೆ 158ರ ಅಧ್ಯಕ್ಷ ರವಿ ಬೈಲು, ಬೂತ್ ಸಂಖ್ಯೆ 159ರ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ ಮನೆಗೆ ಶಾಸಕರು ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗೂ ಪ್ರಮುಖರು ಭೇಟಿ ನೀಡಿ ನಾಮಫಲಕ ಅನಾವರಣ ಮಾಡಿದರು.
ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಜಿ.ಪಂ ಮಾಜಿ.ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ವಿಠಲ ನಾಯ್ಕ್, ಲತೀಶ್, ರಂಜಿನಿ, ಮಮತ, ಆನಂದ ಶೆಟ್ಟಿ, ಹರಿಣಾಕ್ಷಿ, ಉತ್ತಮ್ ಕುಮಾರ್, ಚಂದ್ರಶೇಖರ, ಶಿವರಾಜ್ ಶೆಟ್ಟಿ, ಆಶೋಕ್, ಮಲ್ಲಿಕಾ, ಚೈತ್ರ, ಶೋಭಾ, ಬಿ.ಕೆ, ಅಣ್ಣು ಪೂಜಾರಿ ರಾಜೇಶ್, ಹರಿಣಾಕ್ಷಿ, ಪ್ರಮುಖರಾದ ಕಮಲಾಕ್ಷಿ ಕೆ.ಪೂಜಾರಿ, ಸುಲೋಚನ ಜಿ.ಕೆ.ಭಟ್, ಚೆನ್ನಪ್ಪ ಆರ್.ಕೋಟ್ಯಾನ್, ರಮನಾಥ ರಾಯಿ, ಗಣೇಶ್ ರೈ ಮಾಣಿ, ಆನಂದ ಶಂಭೂರು, ದಿನೇಶ್ ಅಮ್ಟೂರು , ಪ್ರಕಾಶ್ ಅಂಚನ್, ಜನಾರ್ದನ ಬೊಂಡಾಲ, ಮೋಹನ್ ಪಿ.ಎಸ್, ಭಾರತಿ ಚೌಟ, ಲಖಿತ ಆರ್. ಶೆಟ್ಟಿ, ಲೋಕಾನಂದ, ರಮೇಶ್, ಡೊಂಬಯ್ಯ ಟೈಲರ್, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.