ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರವಾದ ಯೋಜನೆಗಳನ್ನು ಗ್ರಾಮದ ಪ್ರತಿಯೊಬ್ಬರ ಮನೆಗೆ ತಲುಪಿಸುವ ಮೂಲಕ ಪಕ್ಷಕ್ಕೆ ಬಲತುಂಬುವ ಕೆಲಸ ಬೂತ್ ಮಟ್ಟದ ಕಾರ್ಯಕರ್ತರ ಮೂಲಕ ಆಗಬೇಕಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅಮ್ಟೂರು ಗ್ರಾಮದ 181 ಬೂತ್ ಅಧ್ಯಕ್ಷ ಶ್ರೀಧರ್ ಪೂಜಾರಿ , ಬೂತ್ ಸಂಖ್ಯೆ 182, ರ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಬೂತ್ ಸಂಖ್ಯೆ 183 ರ ಅಧ್ಯಕ್ಷ ವಿಠಲ ಪ್ರಭು ಅವರ ಮನೆಗೆ ಬೇಟಿ ನೀಡಿ ನಾಮಫಲಕ ಅಳವಡಿಸಿ ಬಳಿಕ ಬೂತ್ ಸಮಿತಿ ಕಾರ್ಯಕರ್ತರ ಜೊತೆ ಮಾತನಾಡಿದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾರ್ಗದರ್ಶನ ನೀಡಿದರು. ಬೂತ್ ಮಟ್ಟದ ಅಧ್ಯಕ್ಷ ರುಗಳ ಮನೆ ಬೇಟಿ ಮಾಡಿ ನಾಮಫಲಕ ಅಳವಡಿಸಲಾಯಿತು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಗ್ರಾಪಂ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಪವಿತ್ರ, ಗೋಪಾಲಕೃಷ್ಣ ಪೂವಳ, ಸುಷ್ಮಾ, ಪ್ರೇಮ, ಇಲ್ಯಾಸ್, ಜಯಂತ ಗೌಡ , ಲಕ್ಮೀ ವಿ.ಪ್ರಭು, ಲಖಿತ ಆರ್ ಶೆಟ್ಟಿ, ಪಕ್ಷ ಪ್ರಮುಖರಾದ ದಿನೇಶ್ ಅಮ್ಟೂರು, ಗಣೇಶ್ ರೈ ಮಾಣಿ, ರಮನಾಥ ರಾಯಿ, ಮೋನಪ್ಪ ದೇವಸ್ಯ, ವಜ್ರನಾಥ ಕಲ್ಲಡ್ಕ, ಆನಂದ ಶಂಭೂರು , ಜಿತೇಶ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಪ್ರೇಮ ಶೆಟ್ಟಿ, ದೇವಕಿ ದಿವಾಕರ ಪೂಜಾರಿ, ಇಂದಿರಾ ರೈ, ನಂದಗೋಕುಲ ಮಹಾಬಲ ಶೆಟ್ಟಿ, ತ್ರಿವೇಣಿ ಮತ್ತಿತರರ ಪ್ರಮುಖ ರು ಉಪಸ್ಥಿತರಿದ್ದರು.