ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಬಾಕಿ ಉಳಿದಿರುವ ಇ – ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳಿಗೆ ಸರ್ಕಾರ ಸೆ.1ರಿಂದ 10ರವರೆಗೆ ಇ ಕೆವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾಕಿ ಉಳಿದಿರುವ ಪಡಿತರ ಚೀಟಿ ಕುಟುಂಬದವರು ನಿಗದಿಪಡಿಸಲಾದ ದಿನಾಂಕದೊಳಗೆ ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಹೋಗಿ ಇ ಕೆವೈಸಿ ಮಾಡುವಂತೆ ಅವರು ಕೋರಿದ್ದಾರೆ.