ಆರಾಧನೆ

ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು ?

ಪ್ರತಿ ವರ್ಷ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಕೋರೋನಾ ಮಹಾಮಾರಿಯಿಂದ ಬಂದೆರಗಿರುವ ಆಪತ್ಕಾಲದಲ್ಲಿ ಒಟ್ಟಿಗೆ ಸೇರುವುದು ಸಮಂಜಸವಲ್ಲ. ಆದುದರಿಂದ ನಾವೆಲ್ಲರೂ ನಮ್ಮ ಮನೆಯಲ್ಲೇ ಇದ್ದು ಭಕ್ತಿ ಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬಹುದು ಎಂದು ನೋಡೋಣ.

ಆಧಾರ : www.sanatan.org/kannada – ಶ್ರೀ. ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ , ಸಂಪರ್ಕ : 9342599299

1. ಶ್ರೀಕೃಷ್ಣನಿಗೆ ಯಾವ ಸಮಯದಲ್ಲಿ ಪೂಜೆ ಮಾಡಬೇಡು ? ಶ್ರೀಕೃಷ್ಣನ ಜನ್ಮವು ಮಧ್ಯರಾತ್ರಿ 12 ಗಂಟೆಗೆ ಆಯಿತು. ಆದುದರಿಂದ ಅದಕ್ಕಿಂತ ಮೊದಲೇ ಪೂಜೆಯ ತಯಾರಿಯನ್ನು ಮಾಡಿಟ್ಟುಕೊಳ್ಳಿ. ರಾತ್ರಿ 12 ಗಂಟೆಗೆ ಸರಿಯಾಗಿ ಶ್ರೀಕೃಷ್ಣನಿಗೆ ಜೋಗುಳವನ್ನು ಹಾಡಿ.

2. ಶ್ರೀಕೃಷ್ಣನಿಗೆ ಪೂಜೆಯನ್ನು ಹೇಗೆ ಸಲ್ಲಿಸುವುದು ? ಶ್ರೀಕೃಷ್ಣನಿಗೆ ಜೋಗುಳ ಹಾಡಿದ ನಂತರ ಶ್ರೀಕೃಷ್ಣನ ವಿಗ್ರಹ ಅಥವಾ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಬೇಕು.

ಶ್ರೀಕೃಷ್ಣನ ಪೂಜೆ  ಷೋಡಶೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನಿಗೆ ‘ಷೋಡಶೋಪಚಾರ ಪೂಜೆಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಪಂಚೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನಿಗೆ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆಯನ್ನು ಮಾಡಬೇಕು. ಇದರಲ್ಲಿ ಗಂಧ, ಅರಿಶಿಣ-ಕುಂಕುಮ, ಹೂವು, ಧೂಪ, ದೀಪ ಮತ್ತು ನೈವೇದ್ಯಗಳನ್ನು ಈ ಕ್ರಮದಿಂದ ಅರ್ಪಿಸುವಾಗ ‘ಸಪರಿವಾರಾಯ ಶ್ರೀಕೃಷ್ಣಾಯ ನಮಃ |’ ಎಂಬ ಮಂತ್ರವನ್ನು ಉಚ್ಚರಿಸಬೇಕು. ಶ್ರೀಕೃಷ್ಣನಿಗೆ ಮೊಸರವಲಕ್ಕಿ ಮತ್ತು ಬೆಣ್ಣೆಯ ನೈವೇದ್ಯವನ್ನು ಅರ್ಪಿಸಿ ನಂತರ ಆರತಿಯನ್ನು ಬೆಳಗಬೇಕು.

3. ಶ್ರೀಕೃಷ್ಣನ ಮಾನಸ ಪೂಜೆ ಕಾರಣಾಂತರಗಳಿಂದ ಶ್ರೀಕೃಷ್ಣನಿಗೆ ಪ್ರತ್ಯಕ್ಷವಾಗಿ ಪೂಜೆ ಸಲ್ಲಿಸಲು ಆಗದಿದ್ದರೆ ಮಾನಸ ಪೂಜೆಯನ್ನು ಕೂಡ ಮಾಡಬಹುದು. ಇದರಲ್ಲಿ ಮನಸ್ಸಿನಲ್ಲಿಯೇ ಸಾಕ್ಷಾತ್ ದೇವರು ನಮ್ಮ ಮುಂದಿದ್ದಾರೆ ಎಂದು ಭಾವಿಸಿ ಪ್ರತ್ಯಕ್ಷ ಪೂಜೆಯಲ್ಲಿ ಮಾಡುವ ಪ್ರತಿಯೊಂದು ಉಪಚಾರವನ್ನು ಮಾಡಬಹುದು. ಇದಕ್ಕೆ ಯಾವುದೇ ಬಂಧನಗಳಿರುವುದಿಲ್ಲ.

4. ಪೂಜೆಯಾದ ನಂತರ ನಾಮಜಪ ಮಾಡಿ ! ಶ್ರೀಕೃಷ್ಣನ ಜನ್ಮಾಷ್ಟಮಿಯ ಪೂಜೆ ಆದ ನಂತರ ಮನೆಯವರೆಲ್ಲರೂ ಸೇರಿ ‘ಓಂ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಓಂ |’ ನಾಮ ಜಪಿಸಿ.

5. ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡುವುದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವ ‘ನ ಮೇ ಭಕ್ತಃ ಪ್ರಣಶ್ಯತಿ |’ (ನನ್ನ ಭಕ್ತರ ನಾಶವಾಗುವುದಿಲ್ಲ) ವಾಕ್ಯವನ್ನು ಸ್ಮರಿಸಿ, ನಮ್ಮಲ್ಲಿ ‘ಅರ್ಜುನನಂತಹ ಅಪರಿಮಿತ ಭಕ್ತಿಯು ನಿರ್ಮಾಣವಾಗಲಿ’ ಎಂದು ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡಬೇಕು.

ರಂಗೋಲಿ : ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಯಾವ ರೀತಿಯ ರಂಗೋಲಿಯನ್ನು ಬಿಡಿಸಿದರೆ ಅದರಲ್ಲಿ ಹೆಚ್ಚು ಕೃಷ್ಣನ ತತ್ತ್ವದ ಲಾಭ ಸಿಗುವುದು ಇದರ ಅಭ್ಯಾಸ ಮಾಡಿ ಸನಾತನ ಸಂಸ್ಥೆಯ ವತಿಯಿಂದ ನಿರ್ಮಿಸಲಾದ ಶ್ರೀಕೃಷ್ಣನ ಸಾತ್ತ್ವಿಕ ರಂಗೋಲಿಯ ಚಿತ್ರವನ್ನು ಇಲ್ಲಿ ನೀಡುತ್ತಿದ್ದೇವೆ.

ಆಧಾರ : www.sanatan.org/kannada – ಶ್ರೀ. ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ , ಸಂಪರ್ಕ : 9342599299

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ