ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿಜೆಪಿ ಎಸ್.ಟಿ. ಮೋರ್ಚಾ ವಿಶೇಷ ಕಾರ್ಯಕಾರಿಣಿ ಬಿಸಿರೋಡ್ ಸ್ಪರ್ಶ ಕಲಾಮಂದಿರದಲ್ಲಿ ಎಸ್. ಟಿ. ಮೋರ್ಚಾ ಅಧ್ಯಕ್ಷರಾದ ರಾಮ ನಾಯ್ಕ್ ಕುಕ್ಕಿನಾರು ಅಧ್ಯಕ್ಷತೆಯಲ್ಲಿ ಜರಗಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಉದ್ಘಾಟಿಸಿ ಮಾತನಾಡಿ ಸರಕಾರದ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಮೋರ್ಚಾ ಮಹತ್ವದ ಪಾತ್ರವಹಿಸಬೇಕು ಎಂದರು.
ವಿಶೇಷ ಕಾರ್ಯಕಾರಿಣಿಯ ಎರಡನೆಯ ಅವಧಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಜಿಲ್ಲಾ ಎಸ್. ಟಿ. ಮೋರ್ಚಾ ಪ್ರಭಾರಿ ಜಯಶ್ರೀ ಕರ್ಕೇರ ಮತ್ತು ಸಮಾರೋಪದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು.
ಬಂಟ್ವಾಳ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಮಂಡಲ ಕಾರ್ಯದರ್ಶಿ ಹಾಗೂ ಎಸ್. ಟಿ. ಮೋರ್ಚಾದ ಪ್ರಭಾರಿ ರಮನಾಥ ರಾಯಿ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲ್ ಸಂಘಟನಾತ್ಮಕವಾಗಿ ಮಾತನಾಡಿದರು.
ಈ ಸಂದರ್ಭ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ ಹಾಗೂ ರವೀಶ್ ಶೆಟ್ಟಿ ಕರ್ಕಳ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಬಂಟ್ವಾಳ ಮಂಡಲ ಉಪಾಧ್ಯಕ್ಷರೂ ಆದ ಜಯರಾಮ್ ನಾಯ್ಕ್ ಕುಂಟ್ರಕಲ, ಬಂಟ್ವಾಳ ಮಂಡಲ ಕೋಶಾಧಿಕಾರಿ ಪ್ರಕಾಶ್ ಅಂಚನ್, ಮಂಡಲ ಪ್ರಮುಖರಾದ ಪುರುಷೋತ್ತಮ ಶೆಟ್ಟಿ, ಮಂಡಲ ಎಸ್. ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಯಶವಂತ ನಾಯ್ಕ್ ನಗ್ರಿ, ಪಕ್ಷದ ಪ್ರಮುಖರಾದ ಯಶೋಧರ ಕರ್ಬೆಟ್ಟು, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಿತಾ ಪುರುಷೋತ್ತಮ ನಾಯ್ಕ್, ಯುವಮೋರ್ಚಾ ಕಾರ್ಯದರ್ಶಿ ದಯಾನಂದ ಎರ್ಮೆನಾಡ್ ಮತ್ತು ಎಸ್.ಟಿ. ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಎಸ್. ಟಿ. ಸಮುದಾಯದ ಗ್ರಾಮ ಪಂಚಾಯತ್ ಸದಸ್ಯರನ್ನು ಗೌರವಿಸಲಾಯಿತು.ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ್ ಮಂಕುಡೆಕೋಡಿ, ಸ್ವಾಗತಿಸಿದರು. ಜಿಲ್ಲಾ ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಯನ್. ಎರ್ಮೆನಾಡ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಎಸ್. ಟಿ. ಮೋರ್ಚಾ ಉಪಾಧ್ಯಕ್ಷರಾದ ವಿಠಲ ನಾಯ್ಕ್ ಬಾಳ್ತಿಲ ವಂದಿಸಿದರು.