ಬಂಟ್ವಾಳ: ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ಬಂಟ್ವಾಳದಲ್ಲಿ ಸಿದ್ಧ ಉಡುಪುಗಳ ರಿಯಾಯತಿ ದರ ಮಾರಾಟ ಮೇಳ ಆರಂಭಗೊಂಡಿದ್ದು, ಸೆ.7ರವರೆಗೆ ಇದು ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಶುಕ್ರವಾರ ಮಳಿಗೆಯನ್ನು ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉದ್ಘಾಟಿಸಿದರು.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಘಟಕದ ಸಹಯೋಗದಲ್ಲಿ ಈ ಮಳಿಗೆ ನಡೆಯುತ್ತಿದ್ದು, ಸಿರಿ ಸಂಸ್ಥೆಯು ರಾಜ್ಯದಾದ್ಯಂತ ಉತ್ಪಾದನಾ ಘಟಕಗಳು ಕಾರ್ಯಾರಿಸುತ್ತಿದ್ದು, ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುತ್ತಿದೆ. ಮೇಳದಲ್ಲಿ ಶೇ.70ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂದರು.
ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ.ಪಿ, ಜಿಲ್ಲಾ ಯೋಜನಾಧಿಕಾರಿ ಮಹಾಂತೇಶ್, ಸಿರಿ ಮಾರ್ಕೆಟಿಂಗ್ ಮೆನೇಜರ್ ಸುಧಾಕರ್, ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದ ಪ್ರಬಂಧಕ ವಿಶಾಲ್ ಹೆಗ್ಡೆ, ಯೋಜನೆಯ ಬಿ.ಸಿ.ರೋಡ್ ವಲಯಾಧ್ಯಕ್ಷ ಶೇಖರ ಸಾಮಾನಿ, ಸ್ಥಳೀಯ ಒಕ್ಕೂಟದ ಅಧ್ಯಕ್ಷ ರಾಜೇಶ್, ರಘುನಾಥ್ ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ಕೇಶವ ಸ್ವಾಗತಿಸಿದರು. ಸಿರಿ ಸಂಸ್ಥೆಯ ಮೇಲ್ವಿಚಾರಕ ಸಂದೇಶ್ ವಂದಿಸಿದರು. ಮೇಲ್ವಿಚಾರಕಿ ಮಮತಾ ನಿರೂಪಿಸಿದರು.