ಬಂಟ್ವಾಳ: ಚೆನ್ನೈತೋಡಿಯ ದ.ಕ.ಜಿ.ಪಂ. ಉ.ಸ.ಮಾ.ಹಿ.ಪ್ರಾ.ಶಾಲೆಯ 6 ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿದ್ದಾರೆ. ಪವನ್, ಪ್ರತೀಕ್ಷಾ, ಸಾಕ್ಷಿ, ಪ್ರಗತಿ, ವೈಭವಿ ಮತ್ತು ಚೈತ್ರಾ ಆಯ್ಕೆಗೊಂಡವರು ಎಂದು ಶಾಲೆ ಪ್ರಕಟಣೆ ತಿಳಿಸಿದೆ.