ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಾಲಯದ ಜೀರ್ಣೋದ್ಧಾರದ
ಅಂಗವಾಗಿ ನೂತನ ಶಿಲಾಮಯ ದೇಗುಲ ನಿರ್ಮಾಣಗೊಳ್ಳುತ್ತಿದ್ದು, ಬ್ರಹ್ಮಕಲಶೋತ್ಸವ ಸಮಿತಿ ರಚನೆ ಹಾಗೂ ಮುಂದೆ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಮಾಲೊಚಿಸಲು ದೇವಸ್ಥಾನದ ವಠಾರದಲ್ಲಿ ಪೂರ್ವಭಾವಿ ಸಭೆ ಜರಗಿತು.
2022ರ ಫೆ.9ರಿಂದ 14ರವರೆಗೆ ಬ್ರಹ್ಮಕಲಶೋತ್ಸವ ಬ್ರಹ್ಮಶೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ನಡೆಯಲಿದ್ದು, ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರನ್ನು ಸಮಿತಿಯ ಮಾರ್ಗದರ್ಶಕರನ್ನಾಗಿ ಅನುಮೋದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ರವೀಂದ್ರನಾಥ ಎಂ ಭಂಡಾರಿ ಪುಣ್ಕೆಮಜಲು ಅವರನ್ನು ಆರಿಸಲಾಯಿತು. ಕಿಶನ್ ಪ್ರಸಾದ್ ಶೇಣವ ಮತ್ತು ಶ್ರೀ ಪ್ರವೀಣ ಆಳ್ವ ಮಯ್ಯಲ ಪ್ರಧಾನ ಕಾರ್ಯದರ್ಶಿಗಳಾಗಿ, ಯತೀಶ್ ಭಂಡಾರಿ ಕೋಶಾಧ್ಯಕ್ಷರಾಗಿ ಆಯ್ಕೆಗೊಂಡರು.
ಸ್ಮರಣ ಸಂಚಿಕೆ ಷಣ್ಮುಖವಾಣಿ ಇದರ ಪ್ರಧಾನ ಸಂಪಾದಕಿ ರಮಾ ಎಸ್ ಭಂಡಾರಿ ವಿವರ ನೀಡಿದರು. ಈ ಸಂದರ್ಭ ವಿಜ್ಞಾಪನಾ ಪತ್ರವನ್ನು ಅನಾವರಣಗೊಳಿಸಲಾಯಿತು. ಸಭೆಯಲ್ಲಿ ಸಜೀಪಮಾಗಣೆ ಹಾಗೂ ನೆರೆಯ ಗ್ರಾಮಗಳ ಸಂಘ ಸಂಸ್ಥೆಗಳ ಅಧ್ಯಕ್ಷರು, ಪ್ರತಿನಿಧಿಗಳು ಹಾಜರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮುಳ್ಳುಂಜ ವೇಂಕಟೇಶ್ವರ ಭಟ್ಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಜೀಪಮಾಗಣೆ ತಂತ್ರಿಗಳಾದ ವೇದಮೂರ್ತಿಸುಬ್ರಹ್ಮಣ್ಯ ಭಟ್ ಮಂಜಿನಡ್ಕ, ಮಿತ್ತೋಟ ಪದ್ಮನಾಭ ಭಟ್, ಸಜೀಪಗುತ್ತು ಕೋಚು ಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ, ಶ್ರೀ ನಂದಾವರ ವಿನಾಯಕ ಶಂಕರ ನಾರಾಯಣ ದುರ್ಗಾಂಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಎ.ಸಿ. ಭಂಡಾರಿ, ಹಾಲಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ, ದಿ ಮೈಸೂರು
ಇಲೆಕ್ಟ್ರಿಕಲ್ಸ್ ಲಿಮಿಟೆಡ್, ಬೆಂಗಳೂರು ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳ್ಯಾರು, ಮುಗುಳ್ಯ
ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ ಅದ್ರುಕ್ಕು,
ನಿವೃತ್ತ ಶಿಕ್ಷಕರೂ ದೇವಸ್ಥಾನದ ಮಾಜಿ ಮೊಕ್ತೇಸರಾದ ಆನಂದ ರೈ ಅಂಕದಕೋಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ದೀಪಕ್ ಜೈನ್, ಸುನೀತ ಚಂದ್ರಕುಮಾರ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರವೀಂದ್ರ ಕಂಬಳಿ, ಆರಾಧನಾ ಸಮಿತಿ ಅಧ್ಯಕ್ಷರಾದ ಯಶವಂತ ಡಿ. ದೇರಾಜೆಗುತ್ತು, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಕುದ್ಕೋಳಿ ಶ್ರೀ ಕೃಷ್ಣ ಭಟ್, ಶೋಬಿತ್ ಪೂಂಜ, ಯಶೋಧರ ರೈ ಮಾಡಂತಾಡಿಗುತ್ತು, ಶ್ರೀಕಾಂತ್ ಕಾಂತುಕೋಡಿ, ಮಹಾಬಲ ರೈ ಬರ್ಕೆಗುತ್ತು, ಲಿಂಗಪ್ಪ ಎಸ್ ದೋಟ,ವಿಜಯ ರೈ ಕೊದಂಟಿ, ಭಕ್ತಕುಮಾರ್ ಶಟ್ಟಿ, ಸುಧಾಕರ ಕೆ.ಟಿ, ಸುರೇಶ್ ಪೂಜಾರಿ ಶಾಸ್ತಾವು, ಪ್ರೇಮನಾಥ್ ದೇರಾಜೆ, ಡಾ| ಶಿವರಾಮ ಜೋಷಿ, ವೆಂಕಟರಮಣ ಭಟ್, ನಿತಿನ್ ಅರಸ, ಜಯ ಅರಸ ಮಿತ್ತೋಟ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಜೀಪನಡು ಮತ್ತು ಸಜೀಪಪಡು ಗ್ರಾಮದ ಪದಾಧಿಕಾರಿಗಳು, ಆಲಯದಿಂದ ದೇವಾಲಯದೆಡೆಗೆ ಯೋಜನೆಯ ಸಂಗ್ರಾಹಕರು, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಆರಾಧನಾ ಸಮಿತಿಗಳ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಮೂಹಿಕ ಶ್ರೀ ರಕ್ಷಾ ಬಂಧನ ಕಾರ್ಯಕ್ರಮವೂ ಸರ್ವರ
ಪಾಲ್ಗೊಳ್ಳುವಿಕೆಯೊಂದ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಆಳ್ವ ಕಂಚಿಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೋದ್ ಸಾನದಮನೆ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ ಬಂಗೇರ ವಂದನಾರ್ಪಣೆಗೈದರು.