ಬಂಟ್ವಾಳ: ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ಉಸ್ತುವಾರಿ ನಡೆಸುತ್ತಿರುವ ಖಾಸಗಿ ಸಂಸ್ಥೆಯೊಂದರ ಅಧಿಕಾರಿಗಳು ಬಂಟ್ವಾಳದ ಪರಿಸರದಲ್ಲಿ ಜಮೀನು ಸರ್ವೆಗೆ ಆಗಮಿಸಿದ ಸಂದರ್ಭ ಸ್ಥಳೀಯ ಕೃಷಿಕರು ತೀವ್ರ ವಿರೋಧವನ್ನು ಬಂಟ್ವಾಳ ರೈತ ಹೋರಾಟ ಸಮಿತಿ ಮೂಲಕ ವ್ಯಕ್ತಪಡಿಸಿತು.
ಡಿಸಿ, ಪಿಡಿಒ ಅವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಖಾಸಗಿ ಸಂಸ್ಥೆ ಅಧಿಕಾರಿಗಳು ಏಕಾಏಕಿ ನಮ್ಮ ಜಮೀನಿಗೆ ಆಗಮಿಸುವುದು ಸರಿಯಲ್ಲ ಎಂದು ರೈತರು ದೂರಿದರು.
ಹತ್ತು ಸೆಂಟ್ಸ್ ಜಾಗದ ಗಡಿ ಗುರುತು ಮಾಡಲು ಕಂದಾಯ ಇಲಾಖೆಯ ಸರ್ವೇಯರ್ ಗಳಿಗೆ ಹತ್ತು ನೋಟಿಸ್ ನೀಡಬೇಕಾಗುತ್ತದೆ. ಆದರೆ ಕಂಪನಿ ಪರವಾಗಿ ಸರ್ವೇ ಕಾರ್ಯಕ್ಕೆ ಬೆರಳೆಣಿಕೆಯ ದಿನದಲ್ಲೇ ಆಗಮಿಸಿದ್ದಾರೆ.ಎಂದರು.
ಈಗಾಗಲೇ ರೈತರ ಬಳಿ ಇರುವ ನಕ್ಷೆಗಳು ಸೂಕ್ತವಾಗಿರುವುದಲ್ಲ. ಈಗ ಜಿಪಿಎಸ್ ಮೂಲಕ ಸಿದ್ದಪಡಿಸಿದ ನಕ್ಷೆಗಿಂತ ೬ಮೀಟರ್ ಸ್ಥಳ ಬದಲಾವಣೆಯಾಗುವ ಸಾಧ್ಯವಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿಲುವು ತಿಳಿಸುತ್ತೇವೆ. ಸಮಸ್ಯೆ ಬಗೆ ಬರಿದ ಬಳಿಕ ಸರ್ವೇ ಕಾರ್ಯ ನಡೆಸುವುದಾಗಿ ಹೇಳಿ ಬಂದವರು ತೆರಳಿದ್ದಾರೆ.