ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಸೋಮವಾರ ತೆನೆ ಹಬ್ಬ (ಪುದ್ದರ್) ಆಚರಣೆಯು ನಡೆಯಿತು. ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ತೆನೆಗಳನ್ನು ಗುತ್ತಿನವರಿಗೆ ಆಡಳಿತ ಮಂಡಳಿಯವರಿಗೆ,ಅರ್ಚಕರಿಗೆ, ಹಾಗೂ ಸಾವಿರ ಸೀಮೇಯ ಭಕ್ತಾಧಿಗಳಿಗೆ ತೆನೆಗಳನ್ನು ವಿತರಿಸಿದರು. ಪೊಳಲಿ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್ ರಾಮ್ ಭಟ್, ಪರಮೇಶ್ವರ ಭಟ್, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೊಜ, ವಾಸುದೇವ ಮಯ್ಯ, ಅನಂತ ಭಟ್, ಪದ್ಮನಾಭ ಭಟ್ ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.