ಬಂಟ್ವಾಳ: ಸರಪಾಡಿ ಗ್ರಾಪಂಗೆ ಶಾಸಕ ರಾಜೇಶ್ ನಾಯ್ಕ್ ಅವರು ಸೋಮವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಬಿ.ಸಿ.ರೋಡ್‌ನಿಂದ ಸರಪಾಡಿಗೆ ಈಗಿರುವ ಸರಕಾರಿಬಸ್ ಸಂಚಾರದ ವೇಳಾಪಟ್ಟಿ ಸರಿಪಡಿಸುವಿಕೆ ಮತ್ತು ಹೆಚ್ಚುವರಿ ಬಸ್ ಸಂಚರಿಸಲು ವ್ಯವಸ್ಥೆ, ಪಿಂಚಣಿ ಸೌಲಭ್ಯ, ದೈವಸ್ಥಳ ಪ್ರಾ. ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು,ಮೊದಲಾದ ವಿವಿಧ ಬೇಡಿಕೆಗಳನ್ನು ಸಾರ್ವಜನಿಕರು ಶಾಸಕರ ಮುಂದಿರಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಇದನ್ನು ಈಡೇರಿಸುವ ಭರವಸೆ ನೀಡಿದರು.ಸ್ಥಗಿತಗೊಂಡಿರುವ ಅಜಿಲಮೊಗರು-ಕಡೇಶಿವಾಲಯ ಸಂಪರ್ಕ ಸೇತುವೆ ಕಾಮಗಾರಿ ಮಳೆಗಾಲ ಮುಗಿದ ತತ್‌ಕ್ಷಣ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗಿದೆ ಎಂದರು. ಬಳಿಕ ಶಾಸಕರು ಗ್ರಾ.ಪಂ. ಆವರಣದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲ ಜೀವನ್ ಮಿಷನ್ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ನೀರಿನ ಟ್ಯಾಂಕ್ ಕಾಮಗಾರಿಯನ್ನು ಪರಿಶೀಲಿಸಿದರು.
ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ನಳಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡಿಸ್, ಗ್ರಾ.ಪಂ. ಸದಸ್ಯರಾದ ಎನ್. ಧನಂಜಯ ಶೆಟ್ಟಿ,ರಾಮಕೃಷ್ಣ ಮಯ್ಯ, ದಿನೇಶ್ ಗೌಡ, ಸೌಮ್ಯಲತಾ, ಶಾಂತಪ್ಪ ಪೂಜಾರಿ ಹಟದಡ್ಕ, ಕುಸುಮಾ,ಪ್ರಮುಖರಾದ ಸುದರ್ಶನ ಬಜ, ಗಣೇಶ್ ರೈ ಮಾಣಿ,ಶಶಿಕಾಂತ್ ಶೆಟ್ಟಿ ಆರುಮುಡಿ, ದಯಾನಂದ ಶೆಟ್ಟಿ ಮುನ್ನಲಾಯಿ, ವಿಶ್ವನಾಥ ನಾಯ್ಕ, ವಿಶ್ವನಾಥ ಪೂಜಾರಿ, ಕೊರಗಪ್ಪ ಗೌಡ, ನಿಶಾಂತ್ ಶೆಟ್ಟಿ, ಪೂವಪ್ಪ ಪೂಜಾರಿ ಬೊಳ್ಳುಕಲ್ಲು ಮತ್ತಿತರರು ಉಪಸಿತ್ಥರಿದ್ದರು.