ಬಂಟ್ವಾಳ: ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರೇ ಆಸ್ತಿ. ಬಲಿಷ್ಠ ಜಾತ್ಯತೀತ ಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದ್ದು, ಯಾವುದೇ ಸಂದರ್ಭ ಬಂದರೂ ಕಾರ್ಯಕರ್ತರ ನೋವನ್ನು ಅರಿತು ಬೆಂಬಲಕ್ಕೆ ಸದಾ ನಿಲ್ಲಲು ಸಿದ್ಧ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಮ್ಟಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಳಪಟ್ಟ ಅಮ್ಟಾಡಿ, ಕಳ್ಳಿಗೆ, ಅಮ್ಮುಂಜೆ ಕರಿಯಂಗಳ, ಬಡಗಬೆಳ್ಳೂರು, ಅರಳ ಗ್ರಾಮ ಪಂಚಾಯತ್ ಗಳಿಗೆ ಸೇರಿದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ವೇದಿಕೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಚರ್ಚಿಸಲು ವಿನಂತಿಸಿದರು. ಜಿಪಂ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ, ಅಬ್ಬಾಸ್ ಆಲಿ, ಸಂಪತ್ ಕುಮಾರ್ ಶೆಟ್ಟಿ, ಶಿವಪ್ರಸಾದ್ ಕನಪಾಡಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀಲಾ ವಿಲ್ಮಾ ಮೋರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ, ಮುಂಚೂಣಿ ಘಟಕದ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ರೋಶನ್ ರೈ, ಸದಾನಂದ ಶೆಟ್ಟಿ ಕಾವಳಕಟ್ಟೆ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಚಂದ್ರಶೇಖರ್ ಶೆಟ್ಟಿ, ಅಶ್ರಫ್ ಕುಟ್ಟಿಕಲ, ಚಂದ್ರಹಾಸ ಪಲ್ಲಿಪಾಡಿ, ವಲೇರಿಯನ್ ಪಿಂಟೊ, ಮುಖಂಡರಾದ ಮಹಾಬಲ ಬಂಗೇರ, ಮಧುಸೂದನ್ ಶೆಣೈ, ರಮೇಶ್ ನಾಯಕ್ ರಾಯಿ, ರವಿ ಪೂಜಾರಿ ಪಂಜಿಕಲ್ಲು, ರಿಚಾರ್ಡ್ ಮಿನೇಜಸ್, ದಯಾನಂದ ನೇರಂಬೋಳ್, ವೆಂಕಪ್ಪ ಪೂಜಾರಿ, ಮಾಣಿಕ್ಯರಾಜ್ ಜೈನ್, ಅಬ್ದುಲ್ ಖಾದರ್ ಅರಳ, ರಾಮಣ್ಣ ಪೂಜಾರಿ ಅಮ್ಟಾಡಿ, ಗಂಗಾಧರ್ ಪೂಜಾರಿ, ಯೋಗೀಶ್ ಪೂಜಾರಿ, ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…