ನೂತನವಾಗಿ ಅಸ್ತಿತ್ವಕ್ಕೆ ಬಂದ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿಯ ಉದ್ಘಾಟನೆ, ಚಾರ್ಟರ್ ಹಸ್ತಾಂತರ ಮತ್ತು ಪದಗ್ರಹಣ ಕಾರ್ಯಕ್ರಮ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ನಡೆಯಿತು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ಗವರ್ನರ್ ರವೀಂದ್ರ ಭಟ್ ಚಾರ್ಟರ್ ಹಸ್ತಾಂತರಿಸಿ ಉದ್ಘಾಟಿಸಿ, ಪದಗ್ರಹಣ ನೆರವೇರಿಸಿದರು. ಅಧ್ಯಕ್ಷರಾಗಿ ಉದ್ಯಮಿ ಸತೀಶ್ ಕುಮಾರ್, ಕಾರ್ಯದರ್ಶಿಯಾಗಿ ಪಲ್ಲವಿ ಕಾರಂತ್, ಕೋಶಾಧಿಕಾರಿಯಾಗಿ ಆಶಾಮಣಿ ಡಿ. ರೈ, ಉಪಾಧ್ಯಕ್ಷರಾಗಿ ಜಗನ್ನಾಥ ಚೌಟ, ಜತೆಕಾರ್ಯದರ್ಶಿಯಾಗಿ ಸುಪ್ರಿಯಾ ರಮೇಶ್, ಸಾರ್ಜೆಂಟ್ ಅರ್ಮ್ಸ್ ಆಗಿ ಸುಂದರ್ ಬಂಗೇರ ಅಧಿಕಾರ ಸ್ವೀಕರಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ 625 ಅಂಕ ಪಡೆದ ಬಂಟ್ವಾಳ ಎಸ್ ವಿ ಎಸ್ ದೇವಳ ಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಮಲ್ಯ ಅವರನ್ನು ಅಭಿನಂದಿಸಲಾಯಿತು. ಸಂಚಾರಿ ಪೊಲೀಸರಿಗೆ ಹಾಗೂ ಪುರಸಭಾ ಕಾರ್ಮಿಕರಿಗೆ ಕೊಡುಗೆಯಾಗಿ ನೀಡಲಿರುವ ರೈನ್ ಕೋಟ್ ನ್ನು ಬಿಡುಗಡೆ ಗೊಳಿಸಲಾಯಿತು. ಬಂಟ್ವಾಳ ಘಟಕದ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ ನೆಲ್ಕಿಗುಡ್ಡೆ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿಕಟಪೂರ್ವ ಗವರ್ನರ್ ರಂಗನಾಥ್ ಭಟ್, ಮುಂದಿನ ವರ್ಷಕ್ಕೆ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಸುರೇಂದ್ರ ಕಿಣಿ, ರೋಟರಿ ವಲಯ ನಾಲ್ಕರ ಕಾರ್ಯದರ್ಶಿ ಜಯರಾಮ ರೈ, ವಲಯ ಲೆಫ್ಟಿನೆಂಟ್ ಅವಿಲ್ ಮೆನೆಜಸ್, ಕ್ಲಬ್ ಸ್ಥಾಪನೆಗೆ ಕಾರಣಕರ್ತರಾದ ಜಿ ಎಸ್ ಆರ್ ಪದ್ಮನಾಭ ರೈ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ಬಿನ ಪ್ರಥಮ ಮಹಿಳೆ ಹರಿಣಾಕ್ಷಿ ಸತೀಶ್ ವೇದಿಕೆಯಲ್ಲಿದ್ದರು. ಶ್ರೀಶ ಪ್ರಾರ್ಥನೆ ಹಾಡಿದರು.ಜಿ ಎಸ್ ಆರ್ ಪದ್ಮನಾಭ ರೈ ಸ್ವಾಗತಿಸಿ, ಕಾರ್ಯದರ್ಶಿ ಪಲ್ಲವಿ ಕಾರಂತ್ ವಂದಿಸಿದರು. ಜ್ಯೋತಿಂದ್ರ ಶೆಟ್ಟಿ, ಪ್ರಶಾಂತ್ ಕಾರಂತ್, ಗಣೇಶ್ ಶೆಟ್ಟಿ, ಸುಧೀರ್ ಶೆಟ್ಟಿ ಸಹಕರಿಸಿದರು. ಶೇಷಪ್ಪ ಮಾಸ್ಟರ್ ಹಾಗೂ ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.