ಬಂಟ್ವಾಳ ಎಸ್.ವಿ.ಎಸ್.ದೇವಳ ಶಾಲೆ ವಿದ್ಯಾರ್ಥಿ
ಬಂಟ್ವಾಳ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಅವರು ಪೂರ್ಣ ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಅವರಿಗೆ 625ರಲ್ಲಿ 625 ಅಂಕಗಳು ಲಭಿಸಿವೆ.
ಬಂಟ್ವಾಳ: ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಅವರಿಗೆ 625ರಲ್ಲಿ 625 ಅಂಕಗಳು ಲಭಿಸಿವೆ. ಬಂಟ್ವಾಳ ತ್ಯಾಗರಾಜ ರಸ್ತೆ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ರಾಧಿಕಾ ಮಲ್ಯ ಅವರ ಪುತ್ರನಾಗಿರುವ ಪ್ರತೀಕ್ ಅವರು ಮುಂದೆ ಕಾಮರ್ಸ್ ನಲ್ಲಿ ಕಲಿಕೆ ಮುಂದುವರಿಸಿ, ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ಪ್ರಣವ್ ಮತ್ತು ಪ್ರಾರ್ಥನಾ ಎಂಬ ತಮ್ಮ, ತಂಗಿಯರನ್ನು ಹೊಂದಿರುವ ಪ್ರತೀಕ್ ಗೆ ಡಾಕ್ಟರ್, ಇಂಜಿನಿಯರ್ ಆಗುವ ಬದಲು ಉದ್ಯಮಿಯಾಗುವ ಹೆಬ್ಬಯಕೆ. ತನ್ನ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ, ಪೋಷಕರು, ಮನೆಯವರ ಬೆಂಬಲವೇ ಕಾರಣ ಎಂದು ಹೇಳಿರುವ ಅವರು ಸತತ ಓದುವಿಕೆಯೊಂದಿಗೆ ಬಿಡುವಾದಾಗ ಕೊಳಲುವಾದನ ಹವ್ಯಾಸವಾಗಿಟ್ಟುಕೊಂಡಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ. ಇದೀಗ ಜಿಲ್ಲೆಯ 9 ಮಂದಿ ಟಾಪರ್ ಗಳಲ್ಲಿ ಅವರೂ ಒಬ್ಬರು. ಇವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…