ಕಲ್ಲಡ್ಕ

ಕನ್ನಡ ಕಲಿಸುವ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ, ಬೇಕು ಶಿಕ್ಷಣಾಸಕ್ತರ ಪ್ರೋತ್ಸಾಹ

ಹರೀಶ ಮಾಂಬಾಡಿ, www.bantwalnews.com

ಇದು ಇಂಗ್ಲೀಷ್ ಮಾಧ್ಯಮ ಕಲಿಸುವ ಸರ್ಕಾರಿ ಶಾಲೆ ಅಲ್ಲ. ಅಪ್ಪಟ ಕನ್ನಡ ಜೊತೆಗೆ ನಲಿ ಕಲಿಯನ್ನು ವಿಭಿನ್ನವಾಗಿ ಕಲಿಸುವ ಸದ್ಯಕ್ಕೆ ಇನ್ನಷ್ಟು ಅಭಿವೃದ್ಧಿ ಬಯಸುತ್ತಿರುವ ಪುಟ್ಟ ಆದರೆ ಅಷ್ಟೇ ಚೊಕ್ಕಟವಾಗಿರುವ ಸುಂದರ ಶಾಲೆಗೆ ಹಿರಿದಾಗುವ ಹೆಬ್ಬಯಕೆ. ಕಲ್ಲಡ್ಕ ಸಮೀಪ ಕುದ್ರೆಬೆಟ್ಟು ಎಂಬಲ್ಲಿರುವ ಸರ್ಕಾರಿ ಶಾಲೆ ಇದು.
ಅಡುಗೆ ಕೋಣೆ, ನಲಿಕಲಿ ಕಟ್ಟಡ, ಶಾಲೆಯಲ್ಲಿರುವ ಹಳೆಯ ೨ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಸುಣ್ಣ ಬಣ್ಣಗಳಿಂದ ಶಾಲೆಗೆ ಹೊಸ ಹೊಳಪು ದೊರಕಿದೆ. ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ರಗಳೊಂದಿಗೆ ಮಕ್ಕಳಿಗೆ ನಲಿಕಲಿ ಶಿಕ್ಷಣ ದೊರಕುತ್ತಿದೆ. ಜೊತೆಗೆ ಶಾಲಾ ಕೈತೋಟ ಗಮನ ಸೆಳೆಯುತ್ತಿದೆ.
8 ವರ್ಷಗಳ ಮೊದಲು ಇಲ್ಲಿ 19 ಮಕ್ಕಳಿದ್ದರು, ಈಗ ಒಂದರಿಂದ ಏಳನೇ ತರಗತಿವರೆಗೆ 73 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸತತ ಮೂರು ವರ್ಷಗಳಿಂದ ಒಂದನೇ ತರಗತಿಗೆ ಉತ್ತಮ ಸಂಖ್ಯೆಯಲ್ಲಿ ಸೇರ್ಪಡೆಯೂ ಆಗುತ್ತಿದೆ ಶಾಲೆಯಲ್ಲಿ ಬೆಳಗ್ಗೆ 9ರಿಂದ ಯೋಗಾಭ್ಯಾಸವನ್ನೂ ಹೇಳಿಕೊಡಲಾಗುತ್ತದೆ. ಜೊತೆಗೆ ಉಚಿತವಾಗಿ ಯಕ್ಷಗಾನ, ರಂಗ ಕಲೆ, ರಂಗೋಲಿ ತರಬೇತಿ, ವಿಶೇಷ ಅತಿಥಿಗಳಿಂದ ನೈತಿಕ ಶಿಕ್ಷಣವನ್ನೂ ಒದಗಿಸಲಾಗುತ್ತಿದೆ.
.ಊರವರ ಸಹಕಾರದಿಂದ ಕೊಡುಗೆ ಶಾಲೆಗೆ ದೊರಕಿದೆ, ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಮ ಪಂಚಾಯಿತಿ, ಸರ್ವಶಿಕ್ಷಾ ಅಭಿಯಾನದ ಮೂಲಕ ವಿವಿಧ ಯೋಜನೆಗಳ ಯೋಜನೆಗಳು ಹಾಗೂ ಎಂ.ಆರ್.ಪಿ.ಎಲ್.ನ ಸಿ.ಎಸ್.ಆರ್. ನಿಯ ನೆರವಿನಿಂದ ಶಾಲಾಭಿವೃದ್ಧಿ ಸಾಕಷ್ಟು ಆಗಿದೆ. ನಲಿ, ಕಲಿಗೆ ಕೊಠಡಿ ಮಕ್ಕಳನ್ನು ಆಕರ್ಷಿಸುವಂತಿದ್ದರೆ, ಮಕ್ಕಳಿಗೆ ಗ್ರೀನ್ ಬೋರ್ಡ್ ಸಹಿತ ವಿಶೇಷ ಮುತುವರ್ಜಿಯಿಂದ ಶಿಕ್ಷಣವನ್ನು ನೀಡಲಾಗುತ್ತಿದೆ.
ಸದ್ಯಕ್ಕೆ 3 ಕೊಠಡಿಗಳಿರುವ ಶಾಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಮಕ್ಕಳ ಕಲರವ ಇಲ್ಲ. ಆದರೆ ಏಳನೇ ತರಗತಿವರೆಗೆ ವಿಸ್ತಾರವಾಗಿರುವ ಹಾಗೂ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಈ ಶಾಲೆಗೆ ಹೆಚ್ಚುವರಿ ಕೊಠಡಿಗಳು ಅಗತ್ಯವಿದೆ. ಕನ್ನಡದ ಕುರಿತು ಕಾಳಜಿ ಇರುವವರು ಇತ್ತ ನೋಡಿ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ