ಬಂಟ್ವಾಳ: ಬಂಟ್ವಾಳ ಯುವಮೋರ್ಚಾ ಕ್ಷೇತ್ರ ಸಮಿತಿ ಮತ್ತು ಯುವಮೋರ್ಚಾ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆ ಬಂಟ್ವಾಳದ ಪಕ್ಷದ ಕಚೇರಿಯಲ್ಲಿ ಜರುಗಿತು. ಕ್ಷೇತ್ರದ ಉಪಾಧ್ಯಕ್ಷರೂ, ಯುವಮೋರ್ಚಾ ಪ್ರಭಾರಿಗಳಾದ ವಜ್ರನಾಥ ಕಲ್ಲಡ್ಕ ಮಹಾಶಕ್ತಿಕೇಂದ್ರದ ಚಟುವಟಿಕೆಯ ವರದಿ ಪಡೆದುಕೊಂಡು ಕ್ಷೇತ್ರ ಸಮಿತಿಯ ಪ್ರಬಲ ಶಕ್ತಿಯಾಗಿರುವ ಯುವಮೋರ್ಚಾದ ಜವಾಬ್ದಾರಿ ಅವಕಾಶವಾಗಿದ್ದು, ಇದನ್ನು ಉಪಯೋಗಿಸಿಕೊಂಡು ತಾವು ಬೆಳೆಯುವುದರೊಂದಿಗೆ ಪಕ್ಷವನ್ನು ಬೆಳೆಸುವುದು ನಿಮ್ಮ ಗುರಿಯಾಗಿರಲಿ ಎಂದರು. ಜಿಲ್ಲಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಮಾತನಾಡಿ ಯುವಶಕ್ತಿ ನಿಂತ ನೀರಾಗದೆ ಸದಾ ಚಟುವಟಿಕೆಯಲ್ಲಿರಬೇಕು. ಮುಂದೆ ಬರುವ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಯುವಮೋರ್ಚಾ ಸಕ್ರೀಯವಾಗಿ ತೊಡಗಿಸಿ ಪಕ್ಷದ ಗೆಲುವಿಗೆ ಸಹಕರಿಸಬೇಕೆಂದರು. ಕ್ಷೇತ್ರ ಯುವಮೋರ್ಚಾ ಸಮಿತಿಗೆ ನೂತನ ಉಪಾಧ್ಯಕ್ಷರಾಗಿ ಬಾಳ್ತೀಲ ಗ್ರಾಮದ ಕುಶನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷತೆಯನ್ನು ಬಿಜೆಪಿ ಯುವಮೋರ್ಚಾ ಬಂಟ್ವಾಳ ಕ್ಷೇತ್ರದ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು ವಹಿಸಿದ್ದರು. ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶ್ವಥ್ ರಾವ್ ಬಾಳಿಕೆ ಸ್ವಾಗತಿಸಿ ಮತ್ತೋರ್ವ ಪ್ರಧಾನ ಕಾರ್ಯದರ್ಶಿ ದಿನೇಶ್ ದಂಬೆದಾರ್ ವಂದಿಸಿದರು.