ಕಲ್ಲಡ್ಕ

ಸಂಭ್ರಮ ಎಲೆಕ್ಟ್ರಾನಿಕ್ಸ್ ಗೆ ಹತ್ತು ವರ್ಷದ ಹರ್ಷ, ಆಗಸ್ಟ್ 8ರವರೆಗೆ ವಿಶೇಷ ಮಾರಾಟ

ಬಂಟ್ವಾಳ: ಕಲ್ಲಡ್ಕ ಮತ್ತು ಬಿ.ಸಿ.ರೋಡಿನ ತಲಪಾಡಿಯಲ್ಲಿ ವೈವಿಧ್ಯಮಯ ಉಪಕರಣಗಳ ಮಳಿಗೆ ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಗೆ ಹತ್ತರ ಹರುಷ. ಈ ಹಿನ್ನೆಲೆಯಲ್ಲಿ ಆಗಸ್ಟ್ 2ರಿಂದ ಆರಂಭಗೊಂಡಿರುವ ವಿಶೇಷ ಮಾರಾಟ ಉತ್ಸವ ಆಗಸ್ಟ್ 8ರವರೆಗೆ ನಡೆಯಲಿದೆ.

ಕಲ್ಲಡ್ಕದಲ್ಲಿ ಮಳಿಗೆ ಆರಂಭಗೊಂಡು ಕೆಲ ತಿಂಗಳಲ್ಲಿಯೇ ಕಲ್ಲಡ್ಕದ ಪರಿಸರವಷ್ಟೇ ಅಲ್ಲ, ವಿಟ್ಲ, ಕನ್ಯಾನ, ಮಾಣಿ ಕಡೆಗಳಲ್ಲೂ ಮನೆಮಾತಾಗಿ ತನ್ನ ಗ್ರಾಹಕ ಸ್ಪಂದನಾ ಚಟುವಟಿಕೆಗಳಿಂದ ಮನಗೆದ್ದ ಸಂಭ್ರಮ ಬಿ.ಸಿ.ರೋಡ್ ನ ತಲಪಾಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಿಶಾಲವಾದ ಮಳಿಗೆ ಆರಂಭಿಸಿತ್ತು. ಇಲ್ಲೂ ಜನರ ಮನಗೆದ್ದ ಸಂಭ್ರಮ ಎಲೆಕ್ಟ್ರಾನಿಕ್ಸ್ ಇದೀಗ ತನ್ನ ಸ್ಥಾಪನೆಯ ಹತ್ತರ ಹರ್ಷವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುತ್ತಿದೆ. ವಿಶೇಷ  ಆಕರ್ಷಣೆಗಳನ್ನೇ ನೀಡುತ್ತಿದೆ.

ಸೋಮವಾರ  ಎರಡು ಶಾಖೆಗಳಲ್ಲಿಯೂ ದಶ ಸಂಭ್ರಮದ ವಿಶೇಷ ಮಾರಾಟಕ್ಕೆ ಚಾಲನೆ ನೀಡಿಲಾಗಿದ್ದು ಕಲ್ಲಡ್ಕದ ಪ್ರಧಾನ ಕಚೇರಿಯಲ್ಲಿ ಉದ್ಯಮಿ ಜಯಾನಂದ ಆಚಾರ್ಯ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಂದರ್ಭ ಚೈತನ್ಯ ಸಂಕೀರ್ಣದ  ಮಾಲಕ ತಿರುಮಲೇಶ್ವರ ಭಟ್, ಬ್ಯಾಂಕ್ ಆಫ್ ಬರೋಡಾ ಕಲ್ಲಡ್ಕ ಶಾಖೆಯ ಪ್ರಬಂಧಕ ಸದಾಶಿವ ಆಚಾರ್ಯ, ಬ್ಯಾಂಕ್ ಅಧಿಕಾರಿ ಧನಂಜಯ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಸಂಭ್ರಮ ಎಲೆಕ್ಟ್ರಾನಿಕ್ಸ್‌ನ್ ಮಾಲಕ ಗಿರೀಶ್ ನಿಟಿಲಾಪುರ ಉಪಸ್ಥಿತರಿದ್ದರು.

ಜಾಹೀರಾತು

ಬಿ.ಸಿ.ರೋಡಿನ ತಲಪಾಡಿ ಶಾಖೆಯಲ್ಲಿ ನಡೆದ ಸಮಾರಂಭವನ್ನು ಕಟ್ಟಡದ ಮಾಲಕ ಎ.ಬಿ. ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು. ಈ ಸಂದರ್ಭ ಲಿವಾ ಅಗರ್‌ಬತ್ತಿ ವಿತರಕ ಪದ್ಮನಾಭ ಬಡಕಬೈಲು,  ಸಂಭ್ರಮ ಎಲೆಕ್ಟ್ರಾನಿಕ್ಸ್‌ನ ಹಿರಿಯ ವ್ಯವಸ್ಥಾಪಕ ಯೋಗೀಶ್, ತಲಪಾಡಿ ಶಾಖಾ ಕಚೇರಿ ವ್ಯವಸ್ಥಾಪಕ  ಪ್ರಸಾದ್ ಉಪಸ್ಥಿತರಿದ್ದರು. ಆ. 2ರಿಂದ ಆ. 8ರವರೆಗೆ ಸಂಸ್ಥೆ ಸ್ಥಾಪನೆಯ ದಶಸಂಭ್ರಮದ ಅಂಗವಾಗಿ ವಿಶೇಷ ದರ ಕಡಿತದ ಮಾರಾಟ ನಡೆಯಲಿದ್ದು ಗಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.