ಬಂಟ್ವಾಳ: ಶ್ರೀ ಕ್ಷೇ.ಧ. ಗ್ರಾ. ಯೋ. ಬಿಸಿ ಟ್ರಸ್ಟ್ (ರಿ); ಬಂಟ್ವಾಳ, ಪೊಳಲಿ ವಲಯದ ಅಮ್ಮುಂಜೆ ಎಂಬಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ಜರಗಿತು. ಯೋಜನೆಯ ತಾಲೂಕು ಕೃಷಿ ಅಧಿಕಾರಿ ಜನಾರ್ಧನ ಅವರು ಬೀಜದ ಉಂಡೆ ತಾಯಾರಿ ಬಗ್ಗೆ ಮಾಹಿತಿ ನೀಡಿದರು. ಬೀಜ ಗಳು ನಾಶವಾಗದಂತೆ ಮೊಳಕೆಯೊಡೆಯಲು ಪೂರಕ ವಾತಾವರಣ ಸೃಷ್ಟಿಯಾಗುವ ವರೆಗೆ ಪೋಷಕಾಂಶ ಯುಕ್ತ ಮಣ್ಣಿನ ಉಂಡೆಗಳ ಮೂಲಕ ರಕ್ಷಿಸಿಡುವ ವಿಧಾನವನ್ನು ತಿಳಿಸಿದರು. ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ ಕೃಷಿ ಜಾಗ ಇಲ್ಲದ ಆಸಕ್ತರಿಗೆ ತಾರಸಿಯಲ್ಲಿ ಮಲ್ಲಿಗೆ ಕೃಷಿ ಮಾಡುವ ಬಗ್ಗೆ ತಿಳಿಸಿ ಸ್ವ ಉದ್ಯೋಗ ಮಾಹಿತಿ ನೀಡಿದರು.ಜನ ಜಾಗೃತಿ ವೇದಿಕೆ ಅಧ್ಯಕ್ಷ ಜನಾರ್ದನ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ವಜ್ರಾಕ್ಷಿ ಅವರ ಮನೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಶ್ರೀಧರ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ವಲಯ ಮೇಲ್ವಿಚಾರಕಿ ಹರಿಣಾಕ್ಷಿ ಅವರು ಪ್ರಾಸ್ತಾವಿಕ ಮಾತನಾಡಿದರು. ಸೇವಾ ಪ್ರತಿನಿಧಿಗಳಾದ ಅಮಿತಾ. ಬಿ ಸ್ವಾಗತಿಸಿ ನಿರೂಪಿಸಿದರು. ರೇಖಾ ಶೆಟ್ಟಿ ವಂದಿಸಿದರು