ಒಡಿಯೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ದ ಸಂಭ್ರಮ ಸಮಿತಿ ಮತ್ತು ಒಡಿಯೂರು ತುಳುಕೂಟ ಸಹಯೋಗದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಟಿದ ಆಯನೊ ಎಂಬ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಒಡಿಯೂರು ಶ್ರೀಗಳು ತುಳುಬಾಷೆ ತುಳುಲಿಪಿಯನ್ನು ಕಲಿಸಲು ಹೆತ್ತವರೇ ಪ್ರೇರಣೆಯಾಗಬೇಕು ಎಂದರು. ಸಾಧ್ವಿ ಶ್ರೀ ಮಾತಾನಂದಮಯಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ರಾಜಶ್ರೀ ಟಿ. ರೈ ಪೆರ್ಲ ‘ಆಟಿದ ಉಲಮರ್ಗಿಲ್’ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಒಡಿಯೂರು ಶ್ರೀಷಷ್ಠ್ಯಬ್ದ ಸಮಿತಿ ಅಧ್ಯಕ್ಷರಾದ ಕೆ. ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿ ಸುರೇಶ್ ಎ. ರೈ ಉಪಸ್ಥಿತರಿದ್ದರು.ಆಟಿದ ಆಯನ ಕಾರ್ಯಕ್ರಮದ ಪ್ರಯುಕ್ತ ಆಟಿದ ಕಳಂಜ ನಲಿಕೆ, ತುಳಸಿ ಮಾಲೆ ಕಟ್ಟುವ ಹಾಗೂ ಆಟಿ ತಿಂಡಿಗಳ ಸ್ಪರ್ದೆ ನಡೆಯಿತು. ತುಳಸಿ ಮಾಲೆ ಕಟ್ಟುವ ಸ್ಪರ್ದೆಯಲ್ಲಿ ಪುಷ್ಪ ಪ್ರಥಮ ಹಾಗೂ ರಾಜಲಕ್ಷ್ಮೀ ದ್ವಿತೀಯ ಬಹುಮಾನ ಪಡೆದರು. ಆಟಿ ತಿಂಡಿಗಳ ಸ್ಪರ್ದೆಯಲ್ಲಿ ಖಾರದ ತಿಂಡಿಯಲ್ಲಿ ಕುಸುಮಾ ಟಿ ರೈ ಪ್ರಥಮ ಹಾಗೂ ನಾಗವೇಣಿ ಒಡಿಯೂರು ದ್ವಿತೀಯ ಬಹುಮಾನ ಪಡೆದರು. ಸಿಹಿ ತಿಂಡಿಯಲ್ಲಿ ಶ್ರೀಜಾ ರಾಧಕೃಷ್ಣ ಕನ್ಯಾನ ಪ್ರಥಮ ಹಾಗೂ ನಾಗವೇಣಿ ದೇವಪ್ಪ ನೋಂಡ ಪುತ್ತೂರು ದ್ವಿತೀಯ ಸ್ಥಾನ ಪಡೆದರು. ಒಡಿಯೂರು ತುಳು ಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿದರು. ಶ್ರೀ ಒಡಿಯೂರು ತುಳುಕೂಟದ ಕಾರ್ಯದರ್ಶಿ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ತುಳುಕೂಟದ ಜತೆ ಕಾರ್ಯದರ್ಶಿ ಸಂತೋಷ್ ಭಂಡಾರಿ ವಂದಿಸಿದರು.