ಬಂಟ್ವಾಳ: ’ಮಕ್ಕಳ ಲೋಕ’ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾದ ಕೆ. ವಿಠಲ ಶೆಟ್ಟಿಯವರು ಗೌರವ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಮೋಹನ ರಾವ್ ಗೌರವಾಧ್ಯಕ್ಷರಾಗಿರುವರು. ವಿಶ್ವನಾಥ ಗೌಡ ಬಿ. ಖಜಾಂಚಿಯಾಗಿ ಆಯ್ಕೆಯಾಗಿದ್ದು, ವಿಲ್ಮ ಸೀಕ್ವೇರಾ ಮಿತ್ತೂರು ಉಪಾಧ್ಯಕ್ಷೆಯಾಗಿ, ಶಿವರಾಮ ಭಟ್ ನೆಡ್ಲೆ ಕಾರ್ಯದರ್ಶಿಯಾಗಿ ಮತ್ತು ಗಂಗಮ್ಮ ಪುಣಚ ಜೊತೆ ಕಾರ್ಯದರ್ಶಿಯಾಗಿರುವರು. ಈಶ್ವರ ಪ್ರಸಾದ್ ಕನ್ಯಾನ, ರಾಜಾರಾಮ ವರ್ಮ ವಿಟ್ಲ, ಸೀತಾಲಕ್ಷ್ಮೀ ವಿಟ್ಲ, ಮಾಲತಿ ಕಾನತಡ್ಕ, ಎಂ.ಕೆ ನಾಯ್ಕ್ ಅಡ್ಯನಡ್ಕ, ಸುರೇಖ ಯಳವಾರ, ಗೋಪಾಲಕೃಷ್ಣ ಅನಂತಾಡಿ, ರಮೇಶ ನಾಯಕ್ ರಾಯಿ, ಬಾಲಕೃಷ್ಣ ಕಾರಂತ ಎರುಂಬು, ಭವಾನಿ ಶೆಟ್ಟಿ ಮಾಣಿ, ಶಿವಕುಮಾರ ಸಾಯ ಸದಸ್ಯರಾಗಿರುವರು ಎಂದು ಪ್ರಕಟಣೆ ತಿಳಿಸಿದೆ.