ರಸ್ತೆ ವಿಭಜಕಗಳಲ್ಲಿ ಗಿಡ ನೆಟ್ಟ ರೋಟರಿ ಮೊಡಂಕಾಪು ನಿಯೋಜಿತ ಅಧ್ಯಕ್ಷ ಪ್ರೊ.ರಾವ್
ಬಂಟ್ವಾಳ: ಭಾನುವಾರ ಬಿ.ಸಿ.ರೋಡಿನ ಕೈಕಂಬದ ರಸ್ತೆ ವಿಭಜಕದಲ್ಲಿ ಪ್ರೊಫೆಸರ್ ಡಾ. ಗೋವರ್ಧನ ರಾವ್ ಮತ್ತು ಅವರ ಮಗ ಪ್ರಜ್ವಲ್ ಕುಮಾರ್ ಗಿಡ ನೆಡುವ ಮೂಲಕ ಗಮನ ಸೆಳೆದರು. ಪರಿಸರ ಉಳಿವಿಗಾಗಿ ಈ ಕಾರ್ಯ ನಡೆಸುತ್ತಿದ್ದೇವೆ ಎಂದು ರೋಟರಿ ಮೊಡಂಕಾಪು ವಿನ ನಿಯೋಜಿತ ಅಧ್ಯಕ್ಷರೂ ಆಗಿರುವ ರಾವ್ ಹೇಳಿದ್ದು, ರಸ್ತೆ ವಿಭಾಜಕದಲ್ಲಿ ಬಗೆ ಬಗೆಯ ಹೂವಿನ ಗಿಡ ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತಿದೆ. ಇವರಿಂದ ವಾತಾವರಣಕ್ಕೆ ಆಮ್ಲಜನಕದ ಪೂರೈಕೆಯಾಗುತ್ತದೆ ಎಂದಿದ್ದು, ಬ್ರಹ್ಮರಕೂಟ್ಲುವರೆಗೂ ಗಿಡ ನೆಡುವ ಯೋಜನೆ ಕೈಗೊಂಡಿದ್ದಾರೆ. ತಮ್ಮ ಟೆರೇಸ್ನಲ್ಲೂ ಗಾರ್ಡನ್ ಮಾಡಿ ಮಾದರಿಯಾಗಿರುವ ರಾವ್, ಸರಕಾರಿ ಕಚೇರಿಗಳಾದ ಪೋಸ್ಟ್ ಅಫೀಸ್, ಬಸ್ಸು ನಿಲ್ದಾಣ, ಪೊಲೀಸ್ ಸ್ಟೇಷನ್, ರೈಲ್ವೇ ಸ್ಟೇಷನ್ಗಳಲ್ಲಿ ಗಿಡಗಳನ್ನು ನೆಡುವ ಅಥವಾ ಪಾಟ್ಗಲ್ಲಿ ನೆಟ್ಟು ಕೊಡುವ ಉದ್ಧೇಶವನ್ನಿಟ್ಟುಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಪೇಕ್ಷಿಸಿದ್ದಾರೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)