ಬಂಟ್ವಾಳ

ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರಾಗಿ ಟಿ.ಶೇಷಪ್ಪ ಮೂಲ್ಯ ಅವಿರೋಧ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ  2021- 2023 ರ  ಸಾಲಿನ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ  ಟಿ. ಶೇಷಪ್ಪ.ಮೂಲ್ಯ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯ ಕುಂಬಾರರ ಸರಕಾರಿ ನೌಕರರ  ಕ್ಷೇಮಾಭಿವೃ ದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಭಾರತ್ ಸೇವಾದಳದ ಅಧ್ಯಕ್ಷರಾಗಿ, ಶಿಕ್ಷಕ ಪ್ರಕೋಷ್ಟದ ಬಂಟ್ವಾಳ ತಾಲೂಕು ಸಂಚಾಲಕರಾಗಿ, ತುಳುಕೂಟ  ಬಂಟ್ವಾಳ, ಪಿಂಚಣಿದಾರರ ಸಂಘ, ಕುಲಾಲ ಯುವವೇದಿಕೆ, ತುಂಬೆ ಕುಲಾಲ ಸಂಘ ಸಹಿತ ಹಲವು ಸಂಘ, ಸಂಸ್ಥೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಗೌರವಾಧ್ಯಕ್ಷರಾಗಿ ಸುಂದರ್ ಬಿ, ಪ್ರದಾನ ಕಾರ್ಯದರ್ಶಿ  ಪದ್ಮನಾಭ. ಎಂ, ಕೋಶಾಧಿಕಾರಿ  ಸೋಮಯ್ಯ ಹನೈನಡೆ, ಉಪಾಧ್ಯಕ್ಷರು ಸೋಮಪ್ಪ ಮೂಲ್ಯ,  ಶೀನ ಮೂಲ್ಯ ಅಲ್ಲಿಪ್ಪಾದೆ. ಜತೆ ಕಾರ್ಯದರ್ಶಿ ಲಕ್ಷ್ಮಣ ಮೂಲ್ಯ ಮಾರ್ನಬೈಲ್, ಸಂಘಟನಾ ಕಾರ್ಯದರ್ಶಿ ಕಿಟ್ಟಣ್ಣ ಮೂಲ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರತ್ನಾವತಿ, ಓಬಯ್ಯ ಮೂಲ್ಯ, ಚಂದಪ್ಪ ಮೂಲ್ಯ, ವಿಠ್ಠಲ ಮೂಲ್ಯ, ಕೃಷ್ಣ ಶ್ಯಾಮ್, ಡೊಂಬಯ್ಯ ಮೂಲ್ಯ, ರೋಹಿಣಿ, ನೀಲಪ್ಪ ಸಾಲಿಯಾನ್ ಆಯ್ಕೆಗೊಂಡರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ