ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 2021- 2023 ರ ಸಾಲಿನ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಟಿ. ಶೇಷಪ್ಪ.ಮೂಲ್ಯ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯ ಕುಂಬಾರರ ಸರಕಾರಿ ನೌಕರರ ಕ್ಷೇಮಾಭಿವೃ ದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಭಾರತ್ ಸೇವಾದಳದ ಅಧ್ಯಕ್ಷರಾಗಿ, ಶಿಕ್ಷಕ ಪ್ರಕೋಷ್ಟದ ಬಂಟ್ವಾಳ ತಾಲೂಕು ಸಂಚಾಲಕರಾಗಿ, ತುಳುಕೂಟ ಬಂಟ್ವಾಳ, ಪಿಂಚಣಿದಾರರ ಸಂಘ, ಕುಲಾಲ ಯುವವೇದಿಕೆ, ತುಂಬೆ ಕುಲಾಲ ಸಂಘ ಸಹಿತ ಹಲವು ಸಂಘ, ಸಂಸ್ಥೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಗೌರವಾಧ್ಯಕ್ಷರಾಗಿ ಸುಂದರ್ ಬಿ, ಪ್ರದಾನ ಕಾರ್ಯದರ್ಶಿ ಪದ್ಮನಾಭ. ಎಂ, ಕೋಶಾಧಿಕಾರಿ ಸೋಮಯ್ಯ ಹನೈನಡೆ, ಉಪಾಧ್ಯಕ್ಷರು ಸೋಮಪ್ಪ ಮೂಲ್ಯ, ಶೀನ ಮೂಲ್ಯ ಅಲ್ಲಿಪ್ಪಾದೆ. ಜತೆ ಕಾರ್ಯದರ್ಶಿ ಲಕ್ಷ್ಮಣ ಮೂಲ್ಯ ಮಾರ್ನಬೈಲ್, ಸಂಘಟನಾ ಕಾರ್ಯದರ್ಶಿ ಕಿಟ್ಟಣ್ಣ ಮೂಲ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರತ್ನಾವತಿ, ಓಬಯ್ಯ ಮೂಲ್ಯ, ಚಂದಪ್ಪ ಮೂಲ್ಯ, ವಿಠ್ಠಲ ಮೂಲ್ಯ, ಕೃಷ್ಣ ಶ್ಯಾಮ್, ಡೊಂಬಯ್ಯ ಮೂಲ್ಯ, ರೋಹಿಣಿ, ನೀಲಪ್ಪ ಸಾಲಿಯಾನ್ ಆಯ್ಕೆಗೊಂಡರು.