ಜಗತ್ತಿಗೆ ಸಂಕಟ ಬಂದಾಗ ನೆರವಾದ ಸಂಸ್ಥೆ ರೋಟರಿ: ಅಭಿನಂದನ್ ಎ.ಶೆಟ್ಟಿ
ಬಂಟ್ವಾಳ: ಕೊರೊನಾದಂಥ ಸಂಕಟದ ಸನ್ನಿವೇಶಗಳು ಜಾಗತಿಕ ಮಟ್ಟದಲ್ಲಿ ಬಂದಾಗ ರೋಟರಿ ಸಂಸ್ಥೆ ಅವುಗಳ ವಿರುದ್ಧ ಹೋರಾಟ ನಡೆಸುವುದರಲ್ಲಿ ಮುಂಚೂಣಿಯಲ್ಲಿದ್ದುಕೊಂಡು, ಜನಸಾಮಾನ್ಯರಿಗೆ ನೆರವಾಗುವ ಕೆಲಸವನ್ನು ಮಾಡುತ್ತಿದೆ. ರೋಟರಿ ಸದಸ್ಯರಾಗುವುದು ಒಂದು ಅಪೂರ್ವ ಅವಕಾಶ ಎಂದು ರೋಟರಿ ಜಿಲ್ಲೆ 3182ರ ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಅಭಿನಂದನ್ ಎ.ಶೆಟ್ಟಿ ಹೇಳಿದ್ದಾರೆ.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಸಂಜೆ ರೋಟರಿ ಕ್ಲಬ್ ಬಂಟ್ವಾಳ ಟೌನ್ ಘಟಕದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯವನ್ನು ನೆರವೇರಿಸಿ ಅವರು ಶುಭ ಹಾರೈಸಿದರು.
ಹಿಂದೆ ಪೊಲಿಯೋ ನಿರ್ಮೂಲನೆಗೆ ರೋಟರಿ ಕೈಗೊಂಡ ಪಾತ್ರವನ್ನು ಜಗತ್ತೇ ಮೆಚ್ಚುತ್ತಿದೆ. ಈ ಬಾರಿ ಕೊರೊನಾ ಸಂದರ್ಭವೂ ಸಂಸ್ಥೆ ಉತ್ತಮ ಕಾರ್ಯ ನಡೆಸುತ್ತಿದೆ. ಲಾಕ್ ಡೌನ್ ಇದ್ದರೂ ಜನಮಾನಸಕ್ಕೆ ಸ್ಪಂದಿಸುವ ಕೆಲಸವನ್ನು ರೋಟರಿ ಮಾಡುತ್ತಿದೆ. ಜಗತ್ತಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ರೋಟರಿ ಮಾಡಿದೆ ಎಂದು ಅವರು ಹೇಳಿದರು.
ಅಧ್ಯಕ್ಷರಾಗಿ ಶನ್ ಫತ್ ಶರೀಫ್, ಕಾರ್ಯದರ್ಶಿಯಾಗಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಕೋಶಾಧಿಕಾರಿಯಾಗಿ ಸುರೇಶ್ ಎನ್. ಸಾಲಿಯಾನ್, ಪದಾಧಿಕಾರಿಗಳಾಗಿ ಉಮೇಶ್ ಮೂಲ್ಯ, ಹಂಝ ಬಸ್ತಿಕೋಡಿ, ಕಿಶೋರ್ ಕುಮಾರ್, ದೇಜಪ್ಪ ಪೂಜಾರಿ, ಸುರೇಶ್ ನಾವೂರು, ಮಹಮ್ಮದ್ ಹನೀಫ್, ಜಯರಾಜ್ ಎಸ್.ಬಂಗೇರ, ಸುಧಾಕರ ಸಾಲಿಯಾನ್, ನಾಗೇಶ್, ಡಾ.ಸಂತೋಷ್ ಬಾಬು, ಗಾಯತ್ರಿ ಲೋಕೇಶ್, ಮುನೀರ್, ಸುರೇಶ್ ಪಿ, ನಾರಾಯಣ ಪೆರ್ನೆ, ಸುಕುಮಾರ್ ಬಂಟ್ವಾಳ ಸಹಿತ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರೆ, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
ವಲಯ ನಾಲ್ಕರ ಸಹಾಯಕ ಗವರ್ನರ್ ಜಿ.ಸುರೇಂದ್ರ ಕಿಣಿ, ವಲಯ ಕಾರ್ಯದರ್ಶಿ ಜಯರಾಮ ರೈ, ವಲಯ ಲೆಫ್ಟಿನೆಂಟ್ ಅವಿಲ್ ಮಿನೇಜಸ್, ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ ಶುಭ ಹಾರೈಸಿದರು. ಕ್ಲಬ್ ಮಾಜಿ ಅಧ್ಯಕ್ಷ ಜಯರಾಜ್ ಎಸ್.ಬಂಗೇರ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಕಿಶೋರ್, ಆನ್ಸ್ ಕ್ಲಬ್ ಅಧ್ಯಕ್ಷೆ ಸವಿತಾ ಸಿ.ಶೆಟ್ಟಿ ವರದಿ ವಾಚಿಸಿದರು. ಈ ಸಂದರ್ಭ ಕಣ್ಣಿದ ದೃಷ್ಟಿ ಕಳೆದುಕೊಂಡ ಹೇಮಂತ್ ಪೂಜಾರಿ ಅವರ ಚಿಕಿತ್ಸೆಗೆ ಧನಸಹಾಯವನ್ನು ಮಾಡಲಾಯಿತು. ನೂತನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ವಂದಿಸಿದರು. ರೊಟೇರಿಯನ್ ಗಳಾದ ನ್ಯಾಯವಾದಿಗಳಾದ ಕೆ. ನರೇಂದ್ರನಾಥ ಭಂಡಾರಿ ಮತ್ತು ಸುರೇಶ್ ನಾವೂರು ಕಾರ್ಯಕ್ರಮ ನಿರೂಪಿಸಿದರು.