ಬಂಟ್ವಾಳ: ಸರಕಾರದಿಂದ ದೊರಕುವ ವಿವಿಧ ಸವಲತ್ತುಗಳನ್ನು ಸದ್ಭಳಕೆ ಮಾಡಿ ರೈತರು ಪರಂಪರಾಗತವಾದ ಕೃಷಿ ಚಟುವಟಿಕೆಗಳೊಂದಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪಡೆದು ಆಡು ,ಮೇಕೆ ಸಾಕಾಣಿಕೆಯಂಥಹ ಲಾಭದಾಯಕ ಉಪ ಕಸುಬುಗಳಿಗೆ ಉತ್ತೇಜನ ನೀಡಿದಲ್ಲಿ ಯುವ ತಲೆಮಾರಿನ ಜನಾಂಗವು ಕೃಷಿ ಕ್ಷೆತ್ರಕ್ಕೆ ಆಕರ್ಷಿತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಂಗಳೂರು ಶಾಸಕರಾದ ಯು ಟಿ ಖಾದರ್ ಇರಾ ಗ್ರಾಮದ ಪರ್ಲಡ್ಕ ಎಂಬಲ್ಲಿ ನೂತನವಾಗಿ ಐಸಿರಿ ಮೈಂಡ್ ಓವಶನ್ಸ್ ,ಶಿರೋಹಿ ಫಾರ್ಮ್ಸ್ ವತಿಯಿಂದ ಸರಕಾರದ ಸಹಕಾರದ ಮೂಲಕ ಆರಂಭಗೊಂಡ ಕುರಿ, ಮೇಕೆ ಸಾಕಾಣಿಕಾ ಕೇಂದ್ರ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ತಿಳಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ಉಪಾಧ್ಯಕ್ಷರಾದ ಮೊಯ್ದು ಕುಂಜ್ಹಿ, ಸದಸ್ಯರಾದ ಹಮೀದ್ ತಿರ್ತಾಡಿ, ಸ್ಥಳೀಯ ಗಣ್ಯರಾದ ಜಯರಾಜ್ ಇರಾ, ಐಸಿರಿ ಮೈಂಡ್ ಓವಶನ್ಸ್ ,ಶಿರೋಹಿ ಫಾರ್ಮ್ಸ್ ಸಂಸ್ಥೆಯ ಪ್ರಮುಖರಾದ ಜಯಶ್ರೀ ಕರ್ಕೇರಾ, ಶ್ರೀಕಾಂತ್ ಕರ್ಕೇರಾ, ದಾಮೋದರ್ ಉಪಸ್ಥಿತರಿದ್ದರು.
ಸಂಸ್ಥೆಯ ಸಂಸ್ಥಾಪಕರಾದ ಶ್ರೀನಿವಾಸ್ ಗೌಡರವರು ಶಾಸಕರಿಗೆ ಸಂಸ್ಥೆಯ ಸಮಗ್ರ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಆಡು ಮೇಕೆಯಂಥಹ ಸಾಕು ಪ್ರಾಣಿಗಳ ಜೊತೆ ದೇಶದಲ್ಲೇ ಎರಡನೆಯದಾಗಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬಾರಿಗೆ ಕತ್ತೆ ಸಾಕಾಣಿಕೆಯನ್ನೂ ಮಾಡುವ ಉದ್ದೇಶವನ್ನು ಶಾಸಕರಿಗೆ ತಿಳಿಸಿ ಸಹಕಾರ ಕೋರಿ ಧನ್ಯವಾದ ಸಲ್ಲಿಸಿದರು.