ಮಂಗಳೂರಿನಲ್ಲಿರುವ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಭಾಗಿತ್ವದಲ್ಲಿ ಕೋವಿಡ್ ಲಸಿಕಾ ಶಿಬಿರವನ್ನು ಜುಲೈ 16ರಂದು ನಡೆಸಲಾಯಿತು.
ಉರ್ವಸ್ಟೋರಿನ 25 ಮತ್ತು 26ನೇ ವಾರ್ಡಿನ ಕಾರ್ಪೋರೇಟರುಗಳಾದ ಗಣೇಶ ಕುಲಾಲ್ ಮತ್ತು ಜಯಲಕ್ಷ್ಮೀ ಶೆಟ್ಟಿ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಆರೋಗ್ಯ ಅಧಿಕಾರಿ ಡಾ.ಇಲಂಗೊ, ಸ್ವಸ್ತಿಕಾ ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕರಾದ ಡಾ.ರಾಘವೇಂದ್ರ ಹೊಳ್ಳ, ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಾಲಿನಿ ಹೆಬ್ಬಾರ್ ಎನ್ ಉಪಸ್ಥಿತರಿದ್ದರು. ಈ ಶಿಬಿರದ ಪ್ರಯೋಜನವನ್ನು ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪೋಷಕರು ಮತ್ತು ಸಾರ್ವಜನಿಕರು ಪಡೆದರು.