ಬಂಟ್ವಾಳದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿ ಶುಕ್ರವಾರ ಬೆಳಗಿನ ಜಾವ 6.4 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿರುವುದರಿಂದ ನದಿ ಉಕ್ಕಿ ಹರಿಯುವ ಸಂಭವ ಸದ್ಯಕ್ಕಿಲ್ಲವಾದರೂ ಗುರುವಾರ ಸಂಜೆಯ ವೇಳೆ 7 ಮೀಟರ್ ಎತ್ತರದಲ್ಲಿ ಹರಿದ ಕಾರಣ ಸಂಭಾವ್ಯ ಅಪಾಯವನ್ನು ಎದುರಿಸಲು ತಾಲೂಕಾಡಳಿತವೂ ಸನ್ನದ್ಧವಾಗಿದೆ. ನದಿ ತೀರದ ಜನರು ಅನಾವಶ್ಯಕವಾಗಿ ಅಪಾಯಕ್ಕೆ ಮೈಯೊಡ್ಡುವದನ್ನು ಮಾಡದೇ ಜಾಗರೂಕರಾಗಿರುವುದೂ ಅವಶ್ಯವಾಗಿದೆ. ಇನ್ನು ಶುಕ್ರವಾರವೂ ದಟ್ಟ ಮೋಡವಿದ್ದು, ಇಡೀ ದಿನ ಮಳೆ ಸುರಿಯುವ ಎಲ್ಲಾ ಲಕ್ಷಣಗಳೂ ಕಂಡುಬಂದಿವೆ.