ಬಂಟ್ವಾಳ:ಕಲ್ಲಡ್ಕದ ಕೆಳಗಿನಪೇಟೆ ಹೋಟೆಲ್ ಲಕ್ಷ್ಮಿ ನಿವಾಸದ ಹತ್ತಿರ ಭಾರತ್ ಬಿಲ್ಡಿಂಗ್ ನಲ್ಲಿ ವೃಷಭ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಶೋ ರೂಮನ್ನು ಪಿ. ಎಸ್. ಕನ್ಟ್ರಕ್ಷನ್ ಮಾಲೀಕ ಪುಷ್ಪರಾಜ್ ಶೆಟ್ಟಿಗಾರ್ ಶುಭಾರಂಭ ಗೊಳಿಸಿದರು .
ಆರ್.ಟಿ.ಓ .ರಿಜಿಸ್ಟ್ರೇಷನ್ ಹಾಗೂ ರಿಜಿಸ್ಟ್ರೇಷನ್ ರಹಿತ ಪರಿಸರಸ್ನೇಹಿ ವಾಹನಗಳು ಕೇಂದ್ರ ಸರಕಾರದ ಸಬ್ಸಿಡಿಯೊಂದಿಗೆ ಲಭ್ಯವಿದೆ ಹಾಗೂ ವಾಹನಗಳ ಬಿಡಿಭಾಗಗಳ ಮಾರಾಟ, ರಿಪೇರಿ ಗ್ರಾಹಕರಿಗೆ ಅನುಗುಣವಾಗಿ ಒಂದೇ ಸೂರಿನಡಿ ನಲ್ಲಿ ಸೇವೆಗಳು ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರಾದ ಪ್ರಕಾಶ್ ವೀರಕಂಬ ತಿಳಿಸಿದ್ದಾರೆ. ಸಂಸ್ಥೆಯ ಪ್ರಥಮ ಗ್ರಾಹಕರಾದ ಡಿ.ಕೆ. ಇಬ್ರಾಹಿಂ ಪಟ್ಟೆಕೊಡಿ ಹಾಗೂ ದೀಪಾ ಗೋಪಿಕೃಷ್ಣ ನೆಟ್ಲ ಚನಿಲ ಇವರಿಗೆ ವಾಹನದ ಕೀ ಹಸ್ತಾಂತರಿಸಲಾಯಿತು .
ಈ ಸಂದರ್ಭ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ, ಪಂಚಾಯತ್ ಸದಸ್ಯರಾದ ಜಯಂತಿ, ಜಯಪ್ರಸಾದ್, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ, ಗೋಳ್ತಮಜಲು ಪಂಚಾಯತ್ ಸದಸ್ಯೆ ಲಿಖಿತಾ ಆರ್. ಶೆಟ್ಟಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ,ಹಿಂದೂ ಜಾಗರಣ ವೇದಿಕೆಯ ರತ್ನಾಕರ ಶೆಟ್ಟಿ ಕಲ್ಲಡ್ಕ ,ಉದ್ಯಮಿ ಆನಂದ ಆಳ್ವ ಗೋಳ್ತಮಜಲು, ಕೃಷ್ಣ, ಗುರುಪ್ರಸಾದ್, ಡೀಲರ್ ಗಳಾದ ಪದ್ಮರಾಜ್, ದೀಪಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.