ಕಲ್ಲಡ್ಕ

ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ, ರಕ್ತದಾನ ಶಿಬಿರ

ಜಾಹೀರಾತು
1 / 6

ಮಾಣಿ ಸೋಶಿಯಲ್ ಇಖ್ವಾ ಫೆಡರೇಶನ್ ವತಿಯಿಂದಆಂಬುಲೆನ್ಸ್ ಸೇವಾರ್ಪಣೆ ಮತ್ತು ಕೆ.ಎಮ್.ಸಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ
ಗುರುವಾರ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂ ನಲ್ಲಿ ನಡೆಯಿತು.ದಿ. ಹಾಜಿ ಬಿ.ಹುಸೈನ್ (ಸುಲ್ತಾನ್)
ಕೊಡಾಜೆ ಸ್ಮರಣಾರ್ಥ ಅಂಬುಲೆನ್ಸ್ ಸೇವೆಯನ್ನು ಅವರ ಪುತ್ರ ಉಮ್ಮರ್ ಫಾರೂಕ್ ಸೇವಾರ್ಪಣೆಗೈದರು. ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು.ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಮಾಣಿ ಶ್ರೀ ಪದ್ಮಾ ಕ್ಲಿನಿಕ್ ನ ಡಾ. ಶ್ರೀನಾಥ್ ಆಳ್ವ ಮಾತನಾಡಿ ಯುವ ಸಮುದಾಯ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಳ್ಳುತ್ತಿರುವುದು ಶ್ಲಾಘನೀಯ ಎಂದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ , ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಕೊಪ್ಪರಿಗೆ, ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯ ಹನೀಫ್ ಖಾನ್ , ಮಿಲ್ಲತ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಉಮ್ಮರ್ ರಾಜ್ ಕಮಲ್, ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಹುಲ್ ಹಮೀದ್, ಬರಿಮಾರು ಶ್ರೀ ಮಹಮ್ಮಾಯಿ ದೇವಸ್ಥಾನ ಆಡಳಿತ ಮೊಕ್ತೇಸರ ರಾಕೇಶ್ ಪ್ರಭು, ಸೂರಿಕುಮೇರ್ ಚರ್ಚ್ ನ ಮಾಜಿ ಉಪಾಧ್ಯಕ್ಷ ರೋಶನ್ ಮಾರ್ಟಿಸ್, ಪಿ.ಎಫ್.ಐ. ವಿಟ್ಲ ಜಿಲ್ಲಾ ಅಧ್ಯಕ್ಷ ಝಕರಿಯಾ ಗೋಳ್ತಮಜಲು, ದ.ಕ.ಜಿಲ್ಲಾ ವಿಖಾಯ ಚೆಯರ್ಮೇನ್ ಇಸ್ಮಾಯಿಲ್ ತಂಞಲ್ ಉಪ್ಪಿನಂಗಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ರಾಜ್ಯ ಕೋ ಆರ್ಡಿನೇಟರ್, ಅಶ್ರಫ್ ಕಿನಾರ, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಕ್ತದಾನ ಶಿಬಿರದಲ್ಲಿ 60 ಮಂದಿ ರಕ್ತದಾನಗೈದರು. ಫೆಡರೇಶನ್ ಕೋಶಾಧಿಕಾರಿ ರಶೀದ್ ಕೋರ್ಯ ಸ್ವಾಗತಿಸಿ, ಕಾರ್ಯದರ್ಶಿ ಜೈನುಲ್ ಅಕ್ಬರ್ ಪ್ರಸ್ತಾವನೆಗೈದರು. ಉಪಾಧ್ಯಕ್ಷ ರಿಯಾಝ್ ಕಲ್ಲಾಜೆ ವಂದಿಸಿ, ಪಿ.ಜೆ.ಅಬ್ದುಲ್ ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ