ಬಂಟ್ವಾಳ: ಕಂದಾಯ ದಿನಾಚರಣೆ ಹಿನ್ನೆಲೆಯಲ್ಲಿ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ಹಲಸಿನ ಸಸಿ ನೆಡುವ ಮೂಲಕ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಹಸಿರೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ನೆಟ್ಟ ಗಿಡ ಮರವಾಗಿ ಫಲ ನೀಡುವವರೆಗೆ ಅದರ ಆರೈಕೆ ಮಾಡುವ ಜವಾಬ್ದಾರಿಯೂ ನಮ್ಮದು ಎಂದರು. ಕೇಂದ್ರ ಸ್ಥಾನಿಯ ಉಪತಹಸೀಲ್ದಾರ್ ಅಣ್ಣು ನಾಯ್ಕ್, ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ಭೂಮಿ ಶಾಖೆ ಪ್ರಭಾರ ಶಿರಸ್ತೇದಾರ್ ಭಾನು ಪ್ರಕಾಶ್, ಕಂದಾಯ ನಿರೀಕ್ಷಕರಾದ ನವೀನ್ ಬೆಂಜನಪದವು , ರಾಮ ಕಾಟಿಪಳ್ಳ, ದ.ಕ.ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜೆ.ಜನಾರ್ದನ, ಕಂದಾಯ ನೌಕರರ ಸಂಘ ಬಂಟ್ವಾಳ ಅಧ್ಯಕ್ಷ ಪ್ರಕಾಶ್.ಪಿ., ಉಪಾಧ್ಯಕ್ಷ ಸೀತಾರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೆ.ಎಚ್. ಬಂಟ್ವಾಳ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕೆ.ಪೂಜಾರಿ, ಬಂಟ್ವಾಳ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಉಪಾಧ್ಯಕ್ಷ ಕರಿಬಸಪ್ಪ ಜಿ ನಾಯಕ್, ಗ್ರಾಮ ಸಹಾಯಕರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷ ಮೋಹನ್ ದಾಸ್ ಕಲ್ಲಡ್ಕ, ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.