ಬಂಟ್ವಾಳ

ಬಂಟ್ವಾಳ ಪುರಸಭೆ ವತಿಯಿಂದ ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ತಪಾಸಣೆ

ಜಾಹೀರಾತು

ಬಂಟ್ವಾಳ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಬಂಟ್ವಾಳ ಪುರಸಭೆ ವತಿಯಿಂದ ಕೋವಿಡ್ ಪರೀಕ್ಷಾ ಕಾರ್ಯಕ್ರಮ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆಯಿತು.ಆಟೊ ಪಾರ್ಕಿಂಗ್ ನಲ್ಲಿರುವ ಆಟೊ ಚಾಲಕರು, ಕಾರು ಚಾಲಕರು, ಅಂಗಡಿಗಳ ಮಾಲೀಕರು, ಕಾರ್ಮಿಕರ ತಪಾಸಣೆಯನ್ನು ಮಾಡಲಾಯಿತು. ಒಟ್ಟು 200ಕ್ಕೂ ಅಧಿಕ ಮಂದಿಯ ತಪಾಸಣೆ ನಡೆದ್ದಿದ್ದು, ಇಬ್ಬರಿಗೆ ಪಾಸಿಟಿವ್ ಬಂದಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತೇಜೋಮೂರ್ತಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ,  ಆರೋಗ್ಯ ನಿರೀಕ್ಷಕ ಜಯಶಂಕರ್ ಪ್ರಸಾದ್, ಕಂದಾಯ ನಿರೀಕ್ಷಕ ಪುರುಷೋತ್ತಮ್, ಕಿರಿಯ ಅಭಿಯಂತರ ಡೊಮಿನಿಕ್ ಡಿಮೆಲ್ಲೊ, ಕಿರಿಯ ಅಭಿಯಂತರ ಸಹಾಯಕ ಇಕ್ಬಾಲ್ ಪರ್ಲಿಯಾ, ಪುರಸಭೆಯ ಪ್ರಥಮ ದರ್ಜೆ ಸಹಾಯಕರಾದ ರಝಾಕ್, ಬಿಲ್ ಕಲೆಕ್ಟರ್ ರಾಘವೇಂದ್ರ, ಸಿಬ್ಬಂದಿ ಜಯಲಕ್ಷ್ಮಿ, ಬಂಟ್ವಾಳ ಸಂಚಾರಿ ಆರೋಗ್ಯ ಕೇಂದ್ರದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಪುರಸಭೆಯಿಂದ ಜಾಗೃತಿ ಸಂದೇಶಗಳನ್ನು ಬಿತ್ತರಿಸಲಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ