ಬಂಟ್ವಾಳ: ಪಹಣಿಗಳಿಗೆ ಡಿಜಿಟಲ್ ಸಹಿ ಇರುವ ಕಾರಣ, ಜುಲೈ.1ರಿಂದ 12ರವರೆಗೆ ಪಹಣಿ ವಿತರಣೆ ಇರುವುದಿಲ್ಲ. ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಕಾರ್ಯಾಚರಿಸುವ ಬಂಟ್ವಾಳ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಸರಿಸುಮಾರು 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ನಡೆಯುವ ಪ್ರಕ್ರಿಯೆ ಇರುವ ಕಾರಣ ಜುಲೈ.1ರಿಂದ 12ರವರೆಗೆ ಪಹಣಿ ವಿತರಣೆ ಇರುವುದಿಲ್ಲ. ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಮತ್ತು ಪಹಣಿ ವಿತರಣಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿವೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)