ನಿಮ್ಮ ಮನೆ ಪಕ್ಕ ಒಂದು ಭೂಗತ ರಸ್ತೆ ಹಾದು ಹೋಗಿರಬಹುದು ಅಥವಾ ನಿಮ್ಮ ಕಣ್ಣಿಗೆ ಕಾಣದ ಒಂದು ಸುಂದರ ತರಕಾರಿ ತೋಟ ಇರಬಹುದು. ಲಕ್ಷಗಟ್ಟಲೆ ಖರ್ಚು ಮಾಡಿದ ಕಾಂಪೌಂಡು , ಕಿಂಡಿ ಅಣೆಕಟ್ಟು, ತೋಡಿನ ಹೂಳೆತ್ತಿದ್ದು ನಿಮಗೆ ಗೊತ್ತೇ ಇಲ್ಲದೆ ಇರಬಹುದು. ಕನ್ಫ್ಯೂಸ್ ಆಗ್ತಾ ಇದೆಯಾ?
ಗ್ರಾಮಮಟ್ಟದ ಪ್ರತಿಯೊಂದು ಕೆಲಸಕ್ಕೂ ಹೇರಳ ಅನುದಾನ ದೊರಕುವ ಕಾಲವಿದು. ಇವುಗಳಲ್ಲಿ ಉದ್ಯೋಗ ಖಾತರಿ ಯೋಜನೆ ಪ್ರಮುಖವಾದದ್ದು. ಇದರ ಮಾಹಿತಿ ಪಡೆಯುವುದು ನಮ್ಮ ಹಕ್ಕು. ಖರ್ಚು ಮಾಡಿದ ರೂಪಾಯಿ ಲೆಕ್ಕಾನೂ ನೀವು ನಿಮ್ಮ ಮೊಬೈಲ್ ನಲ್ಲೇ ನೋಡಬಹುದು.
ನೀವು ಮಾಡಬೇಕಾದದ್ದು ಇಷ್ಟೇ.. ಈ ಲಿಂಕ್ ಓಪನ್ ಮಾಡಿ ಅಪ್ ಇನ್‌ಸ್ಟಾಲ್ ಮಾಡಿ. https://play.google.com/store/apps/details?id=com.Nrega.Mnrega
ಈ ಅಪ್ ಓಪನ್ ಮಾಡಿದ ಮೇಲೆ ಕರ್ನಾಟಕ ಸೆಲೆಕ್ಟ್ ಮಾಡಿ. ನಂತರ ನಿಮ್ಮ ಜಿಲ್ಲೆ, ತಾಲೂಕು , ಪಂಚಾಯತ್, ಫೈನಾನ್ಶಿಯಲ್ ಯಿಯರ್ ಆಯ್ಕೆ ಮಾಡಿ. ನಂತರ ನಿಮ್ಮ ಗ್ರಾಮ ಪಂಚಾಯತ್ ಪೇಜ್ ಓಪನ್ ಆಗುತ್ತೆ. ಈ ಪೇಜ್ ಒಳಗೆ ಜಾಬ್ ಕಾರ್ಡ್ ಹೊಂದಿರುವವರ ಪೂರ್ತಿ ಪಟ್ಟಿ, ಅವರಿಗೆ ಪಾವತಿ ಮಾಡಿದ ಮೊತ್ತ ಹೀಗೆ ಎಲ್ಲವನ್ನೂ ನೋಡಬಹುದು. R2 ವಿಭಾಗದಲ್ಲಿ 1. Employment offered ಹಾಗೂ R3 ವಿಭಾಗದಲ್ಲಿರುವ 3. consolidated report of payment to worker ನಿಮ್ಮ ಉಪಯೋಗಕ್ಕೆ ಬರುತ್ತದೆ.
ಮಾಹಿತಿ ಪಡೆಯಲು ಸರಕಾರಿ ವೆಬ್‌ಸೈಟ್ ಕೂಡ ಇದೆ. ನ್ಯಾವಿಗೇಶನ್ ಸ್ವಲ್ಪ ಕಷ್ಟ ಆದ ಕಾರಣ ಈ ಆಪ್ ಉಪಯೋಗಿಸಿ ಸುಲಭವಾಗಿ ಮಾಹಿತಿ ಪಡೆಯಬಹುದು. ಸೂಚನೆ: ಅಪ್ ನ ಒಳಗೆ ಬರುವ ಜಾಹೀರಾತನ್ನು ಸಾಧ್ಯವಾದಷ್ಟು ಕ್ಲಿಕ್ ಮಾಡಬೇಡಿ. ಕೆಲವೊಮ್ಮೆ ಸರ್ವರ್ ತಾಂತ್ರಿಕ ತೊಂದರೆಯಿಂದ ಮಾಹಿತಿ ಸಿಗುವುದಿಲ್ಲ. ಈ ಅಪ್ ಉಪಯೋಗಿಸಿ ನಿಮ್ಮ ಮನೆ ಪಕ್ಕದಲ್ಲೇ ನರೇಗಾ ಯೋಜನೆ ಎಲ್ಲಿ ಯಾರು ಏನು ಮಾಡುತಿದ್ದಾರೆ? ಅವರು ಎಷ್ಟು ದಿನ ಮಾಡಿದ್ದಾರೆ ಹಾಗೂ ಎಷ್ಟು ಕೂಲಿ ಹಾಗೂ ಸಾಮಗ್ರಿ ಮೊತ್ತ ಪಡೆದಿದ್ದಾರೆ ಎಂಬ ಮಾಹಿತಿ ಪಡೆಯಬಹುದು.ಈ ಅಪ್ ಪ್ರತಿ ಗ್ರಾಮಸ್ಥರ ಮೊಬೈಲ್ ನಲ್ಲಿ ಇದ್ದರೆ ಏನು ಮಾಡುತ್ತಿದ್ದಾರೆ ಎಂದು ಕಣ್ಣಿಡಲು ಸಾಧ್ಯವಾಗುತ್ತದೆ.. ನರೇಗಾ ಯೋಜನೆ ನಿಜವಾದ ಫಲಾನುಭವಿಗಳಿಗೆ ಪೂರ್ತಿಯಾಗಿ ಮುಟ್ಟಬೇಕಿದೆ. ಅಪ್ ಇನ್‌ಸ್ಟಾಲ್ ಮಾಡಿ ನಿಮ್ಮ ಮನೆ ಸುತ್ತ ಯಾರು ಯಾವ ಉದ್ದೇಶಕ್ಕೆ ನರೇಗಾ ಮಾಡಿದ್ದಾರೆ ಅನ್ನೋದು ನೋಡಿ ಹಾಗೆಯೇ ನಿಮಗೆ ಗೊತ್ತೇ ಇಲ್ಲದ ಕಾಮಗಾರಿ ನಡೆದಿದ್ದರೆ ಹುಬ್ಬೇರಿಸಬೇಡಿ.